Saturday, 27 June 2015

ಕನಸುಗಳು ಮಾರಾಟಕ್ಕಿವೆ

ಕನಸುಗಳು ಮಾರಾಟಕ್ಕಿವೆ ಕೊಳ್ಳಲು ಯಾರಿದ್ದಿರಾ?
ಕಾಲನ ಬರಸಿಡಿಲು ಬಡಿದು ಕರಕಲಾದ ನನ್ನ ಕನಸುಗಳು
ಅವಳ ಕಾಲಿನ ಹಿಮ್ಮಡಿಯಲಿ ಸಿಕ್ಕು ಚೂರಾದ ಮನಸಿನಲಿ
ಅಳಿಯದೆ ಉಳಿದ ಹಲವು ನೆನಪುಗಳಲಿ
ಕನಸುಗಳು ಮಾರಾಟಕ್ಕಿದೆ ಕೊಳ್ಳಲು ಯಾರಿದ್ದಿರಾ?
ಬೋರ್ಗರಿವ ಮಳೆಯಲಿ ಕೊರೆಯುವ ಚಳಿಯಲಿ
ಪಾಚಿಗಟ್ಟಿದ ಕುಚದ ಹಿಂದೆ
ಒಡೆದ ಹೃದಯದಲಿ ಕೊಳೆತ ಮನಸಿನಲಿ
ಬೆಚ್ಚಗೆ ಕೊರೆಯುತ್ತ ಕುಳಿತಿರುವ
ನನ್ನ ಕನಸುಗಳು ಮಾರಾಟಕ್ಕಿವೆ ಕೊಳ್ಳಲು ಯಾರಿದ್ದಿರ?
ಕಡು ರಾತ್ರಿಯ ಪ್ರೀತಿಯ ಸುಡುಬಿಸಿಲಿನಲ್ಲಿ
ಕೂಗಿದೆ ನಂತರ ಕೊರಗಿದೆ
ಅವಳ ಯೋಚನೆಯಲು ನಿಡುಸೂಯ್ದು ಹಾರಾಡಿದೆ
ಕೊನೆಗೆ ತಹಬದಿಗೆ ಬಂದು
ಬದುಕಿನಲಿ ಹೊಸಪುಟ ತೆರೆಯಲು ಕರದ ಅವಶ್ಯಕತೆಗೆ
ಬನ್ನಿ ನನ್ನ ಕನಸುಗಳು ಮಾರಾಟಕ್ಕಿವೆ ಕೊಳ್ಳಲು ಯಾರಿದ್ದಿರ?

No comments:

Post a Comment