ನೀರೆ..! ನೀರೆ.....! ಕಣ್ಣೀರೆ!! ಈ ಹಾಡು ತುಂಬಾ ಕಾಡುತ್ತೆ, ರಾತ್ರಿ ಹಗಲು ಆಫೀಸ್ ಮನೆ ಎಲ್ಲ ಕಡೆ ಗುನಗ್ತಾ ಇರ್ತೀನಿ, ಮಲೆಗಳಲ್ಲಿ ಮಧು ಮಗಳು ನಾಟಕದಲ್ಲಿ ಒಂದು ಸನ್ನಿವೇಶದಲ್ಲಿ ಈ ಹಾಡು ಬರುತ್ತೆ. ಕಾವೇರಿ ಎಂಬ ಹೆಣ್ಣು ಮಗಳು ಕಾಮಾಂದರ ದೃಷ್ಟಿಗೆ ಬಿದ್ದು ಅವರ ಮೋಸದ ಬಲೆಯ ಹೊಕ್ಕು ಕೊನೆಗೆ ಬಾವಿಗೆ ಹಾರಿದಾಗ ಬರುವ ಹಾಡಿದು, ಸಂಗೀತ ಹಂಸಲೇಖ ಅವರದು, ಭಾವುಕ ಮನಸ್ಸಿನ ನನಗೆ ನಾಟಕ ನೋಡಿ ೧೫ ದಿವಸ ಆದರು ಆ ಹಾಡು ಇನ್ನು ಸ್ಮೃತಿ ಪಟಲದಿಂದ ಹೋಗಿಲ್ಲ, ಹೆಣ್ಣಿನ ಅಂತರಂಗದ ನೋವು ಬಹಿರಂಗದ ಹಿಂಸೆ ಅವಳ ಮೇಲಿನ ದೌರ್ಜನ್ಯ ಬರಿ ಆ ಸಂಗೀತದ ಶಬ್ದದಲ್ಲೇ ಅಡಕವಾಗಿದೆ. ಗಂಡಿನ ಅಮಾನುಷ ಕಾಮ ವಂಚನೆಗೆ ಅನೇಕ ಹೆಣ್ಣುಮಕ್ಕಳ ಬಲಿಯಾಗಿವೆ, ಇದಕ್ಕೆ ಕೊನೆ ಏಂದು! ಎನ್ನುವದು ಆ ಬಗವಂತನೆ ತಿಳಿಸಬೇಕು? ಆಗಿನ ಕಾವೇರಿಯಿಂದ ಹಿಡಿದು ಈಗಿನ ನಿರ್ಭಯಾಳ ರಕ್ತ ಮಾಂಸದ ಮುದ್ದೆ ಕೂಗಿ ಕೂಗಿ ಹೇಳ್ತಾ ಇದೆ ಬದುಕಿ ಬದುಕಲು ಬಿಡಿ....
No comments:
Post a Comment