Saturday, 27 June 2015

ಹಸಿರಾಗಿರು ಹೊಸದಾಗಿಬೇಡ

‪#‎ನೀ‬ ‪#‎ಹಸಿರಾಗಿರು‬ ‪#‎ಹೊಸದಾಗಬೇಡ‬
ನೆನಪುಗಳು ಹಸಿಯಾಗಿವೆ ಮತ್ತೊಂದು ಮುಂಗಾರಿಗೆ ಸಿಕ್ಕಿ
ನೀ ಇಟ್ಟ ಹೆಜ್ಜೆ ಗುರುತು ಮತ್ತೆ ಕೆಸರಲಿ ಸಮಾಧಿಯಾಗಿದೆ
ಸಮಾಧಿಯ ಬುಡದಲಿ ನಿನ್ನೊಲುಮೆಯ ಬೇರಲಿ ಏನೊ ಚಡಪಡಿಕೆ
ಆ ಒಲುಮೆ ಬೇರು ಮತ್ತೆ ಚಿಗುರಾಗಿ ಮೆಲ್ಬರುವ ಹವಣಿಕೆ
ಅಯ್ಯೊ ಬೇಡ ಚಿಗುರೆ ಮತ್ತೊಂದು ಒಲುಮೆಯ ಹೆಜ್ಜೆ ಮೇಲ್ಗಡೆ ಕಾದಿದೆ
ನೀನು ಸಮಾದಿಯ ಒಳಗಿನ ಹೊ ಅಷ್ಟೆ,
ನೀ ಈನ್ನೂ ನನ್ನ ಸುಪ್ತ ನೆನಪಿನ ಕನಸು
ಆ ಕನಸಿನ ಸಮಾದಿಯ ಮೇಲೆ ಚಿಗಿಯುತ್ತಿದೆ ಮತ್ತೊಂದು ಹೊಸ ಚಿಗುರು.
ನೀ ಹಸಿರಾಗಿರು ಹೊಸದಾಗಿಬೇಡ.....!!!

No comments:

Post a Comment