ಸೆಗಣಿಯ ಮೇಲಿನ ಸಂಕ್ರಾಂತಿ ಹೂ
ಸಂಜೆ ೬ ರ ಹೊತ್ತಿಗೆ, ಊರ ಹೊರಗೆ ನಿರ್ಜನ ಪ್ರದೇಶ ಒಂಟಿ ಬೈಕ ಸವಾರ ನಾನು. ಆಗ ತಾನೆ ಮಾಹಾ ನಗರಿಯ ಗಿಜಿಗಿಡುವ ಪರಿಸರವನ್ನು ದಾಟಿ ಊರ ಹೊರಗೆ ನೆಮ್ಮದಿ ಹುಡುಕಿಕೊಂಡು ಬಂದಾಗಿತ್ತು ಅಲ್ಲಿ. ನಿರವಯ ಮೌನದ ಆ ಪ್ರದೇಶದಲಿ ತಾನಾಗೆ ಹಳೆ ನೆನಪುಗಳು ಉಕ್ಕಿ ಕಣ್ಣುಗಳು ತೇವದಿಂದ ಮಂಜಾಗಿ ಹೊರ ಕತ್ತಲಿನ ಜೊತೆ ಒಳ ಮನಸ್ಸು ಭಾರವಾಗಿತ್ತು. ಜೇಬು ತುಂಬಾ ದುಡ್ಡಿದೆ, ತಲೆ ತುಂಬಾ ಆಸೆ ಇದೆ ಆದರೇನು ನೆಮ್ಮದಿಯಿಲ್ಲ ಅದೇನೋ ವಿವರಿಸಲಾಗದ ಯಾತನೆ, ಸುಳಿವ ಗಾಳಿಯಲ್ಲಿ ಅದೇನೋ ನೋವಿನ ಕೂಗು, ಮನಸ್ಸಿನಲಿ ಗೊಂದಲ. ಅದಕ್ಕೆಲ್ಲ ಉತ್ತರಗಳಿರಲಿಲ್ಲ ನನ್ನ ಹತ್ತಿರ, ಕಣ್ಣ ಕಂಬನಿ ಮಾತ್ರ ಸಾಂತ್ವನ ಹೆಳಬಯಸಿದಂತಿತ್ತು. ಹಳ್ಳಿ ಹೈದನ ದಿಲ್ಲಿಯ ಕನಸುಗಳು ಅದುದ್ದೆನೋ ನಿಜ, ಆದರೆ ಸತ್ತಿದ್ದು ಸ್ವಂತ ಕನಸು ಜೊತೆಗೆ ನೆಮ್ಮದಿ. ಅದು ಅಮ್ಮನ ಮಮತೆ, ಅಪ್ಪನ ವಾತ್ಸಲ್ಯ, ಗೆಳೆಯರ ಪ್ರೀತಿ, ಹಳ್ಳಿಯ ಗೆಳತಿ, ಪಾಠದ ಶಾಲೆ, ಇಷ್ಟವಾಗದೆ ಮೇಷ್ಟ್ರು, ತೋಟದ ಮನೆ, ಎತ್ತು ಎಮ್ಮೆ, ಊರಿನ ದೇವರಗುಡಿ, ಅಗಸಿ ಬಾಗಿಲು, ಚಿಕ್ಕ ರಸ್ತೆ, ಕೆಂಪು ಬಸ್ಸು ಹೀಗೆ ಹಲವು ಹತ್ತುಗಳು ಕೊಟ್ಟಷ್ಟು ನೆಮ್ಮದಿ, ಹೊಟ್ಟೆ ಪಾಡಿನ ಪಟ್ಟಣದ ಕಾರು ಬೈಕು, ಪಬ್ಬು ಬಾರು, ಥಿಯಟರು, ಗರ್ಲಪ್ರೇಂಡ್ಸು, ವೀಕೆಂಡ ಪಾರ್ಟಿ, ಟೀಮ್ ಜೌಟಿಂಗ, ಇವುಯಾವು ನೆಮ್ಮದಿ ಕೊಡಲಾರವು ಹಳ್ಳಿ ಹುಡುಗರಿಗೆ. ಕಾರಣ ಇವರಿಗೆನಿದ್ರು ಪಟ್ಟಣ ಸೆಗಣಿಯ ಮೇಲಿನ ಸಂಕ್ರಾಂತಿ ಹೂ ಇದ್ದಂತೆ

No comments:
Post a Comment