Saturday, 27 June 2015

ಗುರಿಯಿರದೆ ಬಿಟ್ಟ ಬಾಣ

ಯಾರೋ ಗುರಿಯಿರದೆ ಬಿಟ್ಟ ಬಾಣ,
ಬಂದು ನಾಟಿದೆ ನನ್ನೆದೆಯ.

ಸುರಿವ ಪ್ರೀತಿ ನೆತ್ತರ ಕಂಡು,
ಕೆಂಪೆಂದು ಕುಣಿದಿದೆ ನನ್ನಿ ಹೃದಯ

ಬರಿದೆ ಪದವಲ್ಲದ ಈ ಹಾಡ, 
ನೀ ಬಂದು ಕೇಳುವುದೆಂದು ?

ಮತ್ತೊಮ್ಮೆ ಮಿನುಗಲಿ ನಿನ್ನ ನಗೆಯು, 

ನನ್ನ ಮನದ ಮುಗಿಲಲಿ ಇಂದು.

ಕಾದಿರುವೆ ನನ್ನೊಲವೆ ಬಾ ಬೇಗ ಅಭಿಸಾರಿಕೆ,

 ನನ್ನ ಹೃದಯದ ಸಾಗರಕೆ.

No comments:

Post a Comment