Saturday, 27 June 2015

ನಿನ್ನ ನೆನಪು

ಇಂದು ಏಕೊ ನಿನ್ನ ನೆನಪು
ಎದೆಯಾಂತರಾಳದ ಹುದುಗಿದ ಕನಸುಗಳಲ್ಲಿ ಚಡಪಡಿಕೆ
ಹಾಕಿದ ನೋವಿನ ಸರಪಣಿಂದಾಚೆ ಬರುವ ಹವಣಿಕೆ.
::::::::
ಕಾಲದ ಸುಡು ವಿರಹದ ಬಾಯಾರಿಕೆಯಲಿ ನಿಂತಿರುವೆ
ನಿನ್ನ ಮನದ ಮರಭೂಮಿಯಲಿ
ಪ್ರೀತಿಯ ಒಯಾಸ್ಸಿಸ್ಸ ಸಿಡಿಯಬಹುದೆ?
:;;;;;;;;;;
ಹೇಳು ಗೆಳತಿ ಕವಿದ ಮೊಡವ ಸರಿಸಿ
ಪ್ರೀತಿಯ ಬೆಳಕ ಹುಯ್ಯಬಾರದೆ
ಬರ ಸಿಡಿಲು ಬಡಿದ ಬರಡು ಹೃದಯಕ್ಕೆ ಆಸೆಯ ಚಿಗುರು ನಿನಾಗಬಾರದೆ?
::;;;::::::
ನೂರುಬಾರಿ ಕ್ಷಮೆ ಕೇಳಿದವನ
ಒಂದೇ ಒಂದು ಬಾರಿ ಕ್ಷಮಿಸಬಾರದೆ?
ಕತ್ತಲು ಕವಿದಿರುವ ಈ ಎದೆಗೆ ನಿನ್ನ
ನಗೆಯ ಬೆಳದಿಂಗಳನು ಸುರಿಯಬಾರದೆ?

No comments:

Post a Comment