Saturday, 27 June 2015

ಚೆಲುವೆಯ ನೆನದು

ಕಾಣದಿಹ ಚೆಲುವೆಯ ನೆನದು ದಿನವು ಚಡಪಡಿಕೆ ರಾತ್ರಿಗಳು
ಪ್ರೀತಿಯ ಬಸಿರಿಂದ ಹರಿದ ಚಾಪೆಯ ಮೇಲೆ ಹಡೆದ ನೂರೆಂಟು ಕನಸುಗಳು!
ಹೊದೆವ ಕಂಬಳಿಯ ತೂತುಗಳು ಈಗ ಕಿವಿಯಾಗಿವೆ
ನಾ ಬಿಡುವ ಪ್ರತಿ ಉಸಿರಿನಲು ಕೆಳದ ನಿನ್ನ ಹೆಸರಿವೆ

ಕಾರ್ಮೂಗಿಲ ಮದ್ಯದಲಿ ಮೂಡುವ ಕೊಲ್ಮಿಂಚೆ ನೀನು
ಕಾರ್ಗತ್ತಲಿನಲಿ ಕಂಡ ಮಿಂಚು ಹುಳದ ಬೆಳಕಲಿ ನಿನಿರುವೇನು?
ನೀರಾಸೆಗಳೆ ಬೆಂಬತ್ತಿ ಭೂತಗಳಾಗಿವೆ
ಭವಿಷ್ಯದ ಪ್ರೀತಿಗೆ ಓಡುವ ಓಘಕ್ಕೆ ಬದುಕು ಬಲಿಯಾಗಿದೆ!!
ಜೀವನದ ಓಟಕ್ಕೆ ಕೊನಿಯಿಲ್ಲ ಆದರೆ ಕಾಲವಿದೆ
ಆ ಕಾಲನ ಕೈಯಲ್ಲಿ ಬದುಕಿದೆ, ಆದರೆ ನೀನು???
?

No comments:

Post a Comment