Saturday, 27 June 2015

ಪ್ರೀತಿಯೇ ಎಲ್ಲಕ್ಕಿಂತ ಮೇಲು

ನನ್ನ ನಿನ್ನ ಮನದ ಮಾತುಗಳು ಏಕೊ ಮೌನವಾಗವೆ
ನಿರ್ಲಿಪ್ತತೆಯ ಕನಸಿನ ಭಾವವು ಮನಸಾವರಿಸಿವೆ
ದೂರದಲಿ ನಿನ್ನ ಕಾಲ್ಗೆಜ್ಜೆಯ ಇಂಪಾದ ಪ್ರೇಮ ನಿನಾದ
ಹೃದಯದಲಿ ಒಲುಮೆಯ ಉನ್ಮಾದದ ಸುನಾದ

ಮಿಡಿಯುತಿದೆ ಮತ್ತೊಮ್ಮೆ ಒಲವಿನ ಶೃಂಗಾರದ ಶೃತಿ
ಕೊನೆಯಿಲ್ಲ ಓ ಗೆಳತಿ ಎಂದೆಂದಿಗೂ ನನ್ನ ನಿನ್ನ ಪ್ರೀತಿ
ಅಗೋ ನೋಡು ಬಾನಲ್ಲಿ ಪ್ರೀತಿಸುವ ಹಕ್ಕಿ ಸಾಲ
ಬಾ ಸೇರೋಣ ಅಲ್ಲಿ ಜಗದಲಿ ಪ್ರೀತಿಯೇ ಎಲ್ಲಕ್ಕಿಂತ ಮೇಲು

No comments:

Post a Comment