ಹೇಳಲು ಸಾವಿರ ಮಾತಿದೆ,
ಆದರೆ ಗಂಟಲಿನ ಕತ್ತಲು ಕೊಳವೆಯಲಿ ಸಿಕ್ಕಿಹಾಕಿಕೊಂಡಿವೆ.ಈ ದಿನದ ಬೆಳಕಿಗೆ ಎಂತ ವ್ಯಾಮೋಹವೋ ನಾ ಕಾಣೆ.
ನನ್ನ ಮನದಂತೆ ಈ ಹಗಲು ಕೂಡ ಹೊರಗೆ ಬೋರ್ಗರೆವ ಬೆಳಕು,
ಒಡಲಾಳದಲ್ಲಿ ಅನೇಕ ಶತಮಾನಗಳ ನೋವು ಕಾಪಿಟ್ಟುಕೊಂಡು ಕೂತಿರುವ ಅನಾಮಿಕ ಕಡಲು.
ಬೆಳಕಿನ ಒಳಗೆ ಅನೇಕ ಬಣ್ಣಗಳು, ನನ್ನ ಮನದ ಹಾಗೆ.

ಪ್ರತಿದಿನವೂ ನಾ ಹೇರಿಕೊಂಡ ಕಸುಬಿನಿಂದ-
ಈ ಬೆಳಗುವ ಸೂರ್ಯನ ಕಣ್ತಪ್ಪಿಸಿ ಬದುಕು ಓಡುವುದನ್ನ ರೂಡಿಸಿಕೊಂಡಿದ್ದೆ,
ಆದರೆ ಇಂದೇಕೋ ಮನವು ಬೆಳಕಿನ ತೊಟ್ಟಿಲಿನಲಿ ಮಲಗಿ,
ಭಾವಗಳ ಮೆರವಣಿಗೆಯಲಿ ಮದವೇರಿ ಹುಚ್ಚನಂತೆ ತಿರುಗಬೇಕೆನಿಸುತ್ತಿದೆ.
ಇದಕ್ಕೆ ಅವಳೇ ಕಾರಣವಿರಬೇಕೆನೋ?
ಕಾಣದ ಅವಳ ಬಿಂಭದ ಹುಚ್ಚನ್ನು ಮದವೇರಿಸಿಕೊಂಡಿರುವ ನನಗೆ ತೀರದ ಮೌನ ಇನ್ನು ಮರೀಚಿಕೆ.
ಓ ಸೂರ್ಯನೇ ಮನದ ಮೂಲೆಯಲಿ ಒರಗಿ ಬಿದ್ದಿರುವ ದಶಕಕಗಳ ಕನಸುಗಳಿಗೆ ಮುಕ್ತಿ ಕೊಡು,
ಆಡದೆ ಉಳಿದಿರುವ ಸಾವಿರ ಮಾತುಗಳಿಗೆ ಶಕ್ತಿಕೊಡು.
ನನ್ನೊಲವಿಗೆ ಒಂದು ಚಿರಂತನ ಬೆಳಕು ನೀಡು.

No comments:
Post a Comment