ನಿಜದ ಅನುಬವ
ಗೆಳೆಯರೆ ನಿನ್ನೆ ನನಗಾದ ಒಂದು ಅನುಬವವನ್ನ ನಿಮ್ಮೊಂದಿಗೆ ಹಂಚಿಕೊಳ್ಳುವೆ : ನಿನ್ನೆ ನನಗಾದ ಆ ಅನುಭವ ನಮ್ಮ ಬಸವಾದಿ ಶರಣರ ಮೇಲಿದ್ದ ಅಭಿಮಾನ ನೂರ್ಮಡಿಯಾಯಿತು. ನಿನ್ನೆ ಸುಗ್ಗಿ ಹುಗ್ಗಿ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನ ಸಂಕ್ರಾಂತಿಯ ಪ್ರಯುಕ್ತ ನಮ್ಮ ಘನ ಸರ್ಕಾರ ಕಲಾ ಗ್ರಾಮದಲ್ಲಿ ಹಮ್ಮಿಕೊಂಡಿತ್ತು.ನಮ್ಮ ನಾಡಿನ ಮೂಲೆ ಮೂಲೆಗಳಿಂದಲೂ ಅನೇಕ ಜಾನಪದ ಕಲಾಕಾರರು ಅಲ್ಲಿ ಮೇಳೈಸಿದ್ದರು, ತಮ್ಮ ತಮ್ಮ ನೆಲದ ಅನೇಕ ಕಲಾಭಿನಯಗಳನ್ನ ಅಲ್ಲಿ ಪ್ರಸ್ಥುತಪಡಸ್ತಾ ಇದ್ದರು. ಸುಮ್ಮನೆ ನನ್ನ ಕಣ್ಣು ಅಲ್ಲಿ ಕುಳಿತಿದ್ದ ಗಡ್ಡಾದಾರಿಯಾಗಿದ್ದ ಸುಮಾರು ನಾಲ್ಕೈದು ಇಳೆವಯ್ಯಸ್ಸಿನ ಮುದುಕರು ಕುಳಿತಿದ್ದ ಕಡೆ ಹೋಯಿತು, ಅವರ ಸೋತ ಕಣ್ಣು, ಮುಖದಲ್ಲಿನ ಅಮಾಯಕತೆ, ತಲೆಮೇಲಿನ ರುಮಾಲು ಉತ್ತರ ಕರ್ನಾಟಕದ ಯಾವುದೋ ಒಂದು ಹಳ್ಳಿಯವರೆಂದು ಕಾಣುತಿತ್ತು. ವಿಷಯ ಏನೆಂದರೆ ಹಸಿರು ರುಮಾಲಿನ ಮೀಸೆ ಬೋಳಿಸಿದ ಅವರು ಪಕ್ಕಾ ಮುಸಲ್ಮಾನರಾಗಿದ್ದರು. ನಾನೇನೋ ಮೊಹರಂನಲ್ಲಿ ಹಾಡುವ ಯಾವುದಾದರು ಹಾಡುಗಳನ್ನ ಹಾಡಲು ಬಂದ್ದಿದ್ದಾರೆಂದುಕೊಂಡೆ . ಹಲವಾರು ಕಲಾಪ್ರದರ್ಶನಗಳಾದ ನಂತರ ಇವರ ಸರದಿಯು ಬಂತು, ಕೈಯಲ್ಲಿ ಯಾವುದೆ ರೀತಿಯ ವಾದ್ಯಗಳಿರಲಿಲ್ಲ ಅವರೆಲ್ಲ ಹೋಗಿ ಮೈಕಿನ ಮುಂದೆ ನಿಂತು ಹಾಡತೊಡಗಿದರು. ಅವರು ಹಾಡುತಿದ್ದ ಹಾಡನ್ನ ಕೇಳಿ ಒಂದು ಕ್ಷಣ ಅವಕ್ಕಾದೆ, ಕಾರಣ ಅವರು ಹಾಡುತ್ತಿದದ್ದು ಕಲ್ಯಾಣದ ನಮ್ಮ ಬಸವಾದಿ ಶರಣರ ಕುರಿತಾಗಿ. ಯಾಕೆ ಇದನ್ನ ಇಲ್ಲಿ ಹೆಳ್ತಾ ಇದಿನಿ ಅಂದ್ರೆ. ಮುಸ್ಲಿಂ ಅಂದ್ರ ದರ್ಮಾಂದರು ಎಂದು ನೋಡುವ ಈ ಕಾಲದಲ್ಲಿ, ನಾನು ಹಿಂದು ನೀನು ಮುಸ್ಲಿಂ ಎಂದು ಈಡಿ ದೇಶವೆ ಎರಡಾಗಿರುವಾಗ, ದರ್ಮದ ಹೇಸರಲ್ಲಿ ರಕ್ತಚೆಲ್ಲುತ್ತಿರು ಸಮಯದಲ್ಲಿ ಇಂತಹ ಸಾಮರಸ್ಯದ ವ್ಯಕ್ತಿಗಳನ್ನ ನೋಡಿದಾಗ ಆಯ್ಚರ್ಯಗೊಳ್ಳದೆ ಇರಲಾಗದು. ತಮ್ಮ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಜನರಲ್ಲಿ ದರ್ಮದ ಹೇಸರಲ್ಲಿ ದೇಶವನ್ನೆ ಸುಡಲು ಹೊರಟಿರುವ ದರ್ಮಾಂದರಿಗೆ ಈ ವ್ಯಕ್ತಿಗಳು ಪಾಠವಾಗಿ ನಿಲ್ಲುತ್ತಾರೆ. ಎಲ್ಲಿಯ ಬಸವಣ್ಣ ಎಲ್ಲಿಯ ಮಹಮ್ಮದ ಇದೆಲ್ಲವೂ ಇರುವುದು ನಮ್ಮ ಮಣ್ಣಿನ ಗುಣದಲ್ಲಿ, ದರ್ಮಾಂದತೆಯ ಪರದೆಯ ಕಿತ್ತೊಗೆದು ನವ ಕರ್ನಾಟಕದಲ್ಲಿ ಶಾಂತಿಗೀತೆ ಇಂತವರಿಂದಲೇ ಮೊದಲ್ಗೊಳ್ಳಬೇಕು

No comments:
Post a Comment