ಬಿಜಾಪುರ ಎಂದಾಕ್ಷಣ ನಮಗೆ ಕಾಣುವುದು, ಬಿಜಾಪುರದಲ್ಲಿರುವ 80ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳು, ಬಸವಣ್ಣನ ಜನ್ಮಸ್ಥಾನ, ತಾಳಿಕೋಟಿ ಯುದ್ದ, ಆದಿಲ್ ಶಾಹಿ ಆಡಳಿತ, ಜೋಳದ ರೋಟ್ಟಿ, ಅಲ್ಲಿನ ಸಂಸ್ಕೃತಿ, ಸಾಮರಸ್ಯದ ಬದುಕು, ೫% ಚಳಿ ೪೨ ಬಿಸಿ ಅಲ್ಲಿನ ಬಡತನ ಅಮಾಯಕತೆ, ವಂಶಪಾರಂಪರ್ಯ ರಾಜಕೀಯ, ಆರ್ಥೀಕ ಅಸಮಾನತೆ, ಜಾತಿಯ ವಿಲಕ್ಷಣತೆ, ಉಳ್ಳವರ ದರ್ಪ ಮತ್ತು ಅಲ್ಲಿಯ ಖಡಕ್ ಭಾಷೆ.
ಕರ್ನಾಟಕದ ಅಂತ್ಯಂತ ಹಿಂದುಳಿದ ಜಿಲ್ಲೆ ಬಿಜಾಪುರ ಎಂದರೆ ತಪ್ಪಾಗಲಾರದು. ಅಲ್ಲಿಯ ರಾಜಕೀಯ ಅರಾಜಕತೆ ಜಾತಿಯತೆಯ ಪೆಂಡಭುತದಿಂದಾಗಿ ಅಲ್ಲಿ ಇನ್ನೂ ಬಡತನ ಎಂಬ ಭೂತದ ಕದಂಬಭಾಹು ಸಡಿಲಗೊಂಡಿಲ್ಲ. ಹೆಸರಿಗೆ ಮಾತ್ರ ಇದು ವಿಜಯಪುರ. ಇತಿಹಾಸದ ಪುಟದಲ್ಲಿ ಇದು ಗೆದ್ದಿರಬಹುದು ಆದರೆ ವಸ್ತು ಸ್ಥಿತಿಯಲ್ಲಿ ಅದು ಸೊತಿದೆ ಎನ್ನಬಹುದು.
ಹೈ.ಕ.ಕ್ಕೆ ಸೇರಲಿಲ್ಲ..
ಹೈದ್ರಾಬಾದ್- ಕರ್ನಾಟಕ ಪ್ರದೇಶಕ್ಕೆ ಸೇರ್ಪಡೆಯಾದ ಎಲ್ಲ ಜಿಲ್ಲೆಗಳಿಗಿಂತಲೂ ಬಿಜಾಪುರ ಜಿಲ್ಲೆ ತೀರಾ ಹಿಂದುಳಿದಿದೆ. ಆದರೆ ಹೈದ್ರಾಬಾದ್- ಕರ್ನಾಟಕ ಪ್ರದೇಶಕ್ಕೆ ಗುಲ್ಬರ್ಗ ಸೇರಿದಂತೆ ಅನೇಕ ಜಿಲ್ಲೆಗಳು ಸೇರ್ಪಡೆಯಾಗುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಕೂಗು ವಿಧಾನಸಭೆ, ಪಾರ್ಲಿಮೆಂಟಿನಲ್ಲಿ ಗಟ್ಟಿಯಾಗಿ ಮೊಳಗಲಿಲ್ಲ. ಮೊಳಗಲಿಲ್ಲ ಎನ್ನೂವದಕ್ಕಿಂತ ಮೊಳಗಿಸಲಿಲ್ಲ ಅನ್ನಿ.
ಸರ್ಕಾರ ಬಿಜಾಪುರ ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ನಿರ್ಧಾರ ಕೈಗೊಂಡಿತ್ತು ಆದರೆ ಇಲ್ಲಿಯ ರಾಜಕಾರಣಿಗಳ ಮತ್ಸದಿತನ ಕೊರೆತೆಯಿಂದಾಗಿ ಅದು ಬೇರೆಡೆಗೆ ಸ್ಥಳಾಂತರಗೊಂಡಿತು.
ಕೆರೆಗೆ ನೀರು ತುಂಬುವ ಕಾರ್ಯ...
ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಳು ಹಲವೂ ದಶಕಗಳಿಂದ ಇನ್ನೂ ನಡಿತಾನೆ ಇದೆ ಯಾವಾಗ ಮುಗಿಯುವದೊ ಆ ದೇವರೆ ಬಲ್ಲ.
ತಪ್ಪದ ಕುಡಿವ ನೀರಿ ಬರ...
ಜಿಲ್ಲೆಯಲ್ಲಿ ಕೃಷ್ಣೆ ಬೀಮೆಯಂತಹ ಮಾಹಾ ನದಿಗಳಿದ್ದರೂ ಹನಿ ನೀರಿಗೂ ಹಾಹಾಕಾರವಿದೆ. ರಾಜಕೀಯ ಇಚ್ಚಾಶಕ್ತಿ ಮತ್ತು ಒಗ್ಗಟ್ಟಿನ ಕೊರತೆ ಇಂದಾಗಿ ಜಲ ಕ್ಷಾಮ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಾ ಇದೆ.
ಜನಪ್ರತಿನಿಧಿಗಳೇ ನಿಮ್ಮ ಸಾಧನೆ ಇದೇನಾ?
1. ಪ್ರತಿ ವರ್ಷ ಬರದಿಂದ ತತ್ತರಿಸುತ್ತಿರುವ ಬಿಜಾಪುರ ಜಿಲ್ಲೆಗೆ ಶಾಶ್ವತ ಹಾಗೂ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನವಾಗಿಲ್ಲ.
2. ಉದ್ಯೋಗ ಅರಸಿ ಗೋವಾ, ಮಹಾರಾಷ್ಟ್ರಕ್ಕೆ ಬೆಗಳೂರುಗೆ ತೆರಳುವ ಜನರಿಗೆ ಆರ್ಥಿಕ ಸ್ಥಿತಿಗತಿ ಸುಧಾರಿಸಲು ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ಗುಳೇ ಹೋಗುವವರನ್ನು ತಡೆಯಲು ಉದ್ಯೋಗಾವಕಾಶದ ಸಲುವಾಗಿ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ.
3. ತೋಟಗಾರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥಿತ ನೀರಾವರಿ ಪದ್ಧತಿ ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ.
4. ದೇಶ, ವಿದೇಶದ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಬಿಜಾಪುರದ ವಿಶ್ವವಿಖ್ಯಾತ ಗೋಳಗುಮ್ಮಟ ಐತಿಹಾಸಿಕ ಸ್ಮಾರಕವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಇನ್ನೂ ಎಷ್ಟು ವರ್ಷಗಳು ಬೇಕು? ಬರೀ ಚುನಾವಣೆ ಭಾಷಣದ ವಿಷಯ ವಸ್ತುವಾಗಿರಬೇಕೇ?
5. ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನರು ಐದಾರು ಕಿ.ಮೀ. ವರೆಗೆ ಅಲೆದು ಖಾಸಗಿ ತೆರೆದ ಬಾವಿ, ಕೊಳವೆ ಭಾವಿಗಳ ನೀರು ತರಬೇಕಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸಲು ರಾಜಕಾರಣಿಗಳು ಇಚ್ಚಾಶಕ್ತಿ ಪ್ರದರ್ಶಿಸಿಲ್ಲ.
6. ಬಿಜಾಪುರ ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಘೋಷಣೆ ಮಾಡಿದೆಯಾದರೂ ಅದು ಇನ್ನೂ ಮಹಾನಗರಪಾಲಿಕೆಯಾಗಿ ಮಾರ್ಪಟ್ಟಿಲ್ಲ. ಬರೀ ನಾಮಫಲಕ ಮಾತ್ರ ಬದಲಾಗಿದೆ.
7. ಬಿಜಾಪುರ ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಘನ ಘೋರವಾಗಿದೆ. ರಾತ್ರಿ ಕೆಲವೇ ಗಂಟೆಗಳ ವರೆಗೆ ಮಾತ್ರ ಗ್ರಾಮೀಣ ಪ್ರದೇಶದಲ್ಲಿ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿಲ್ಲ. ಹೊಲದಲ್ಲಿ ಬೆಳೆದ ಪೈರಿಗೆ ಸರಿಯಾಗಿ ನೀರುಣಿಸಲು ಆಗದೆ ವಿದ್ಯುತ್ ಕ್ಷಾಮದಿಂದ ಜನರು ತತ್ತರಿಸಿದ್ದಾರೆ. ಬರೀ ಕೂಡಗಿ ಕಡೆಗೆ ಬೊಟ್ಟು ಮಾಡಿ ತೋರಿಸಿದರೆ ಜ್ವಲಂತ ಸಮಸ್ಯೆಗೆ ತುರ್ತಾಗಿ ಪರಿಹಾರ ಸಿಗುವ ಬಗ್ಗೆ ಯಾರೂ ವಿಚಾರಿಸಿಲ್ಲ.
8. ಬಿಜಾಪುರ ಹೊರ ವಲಯದ ವಿಮಾನ ನಿಲ್ದಾಣದ ಕನಸು ನನಸು ಎಂದು?
9. ಬಿಜಾಪುರ ನಗರದಲ್ಲಿನ 80ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಯಾವುದೇ ಕ್ರಮವಿಲ್ಲ. ಇದರಿಂದಾಗಿ ಬಿಜಾಪುರ ಜಿಲ್ಲೆಯು ಹಾಳೂರು ಹದ್ದಿನಂತಾಗಿದೆ. ಸ್ಮಾರಕಗಳ ರಕ್ಷಣೆಗೆ ಸರ್ಕಾರ ಮನಸ್ಸು ಮಾಡಿಲ್ಲ. ಈ ಬಗ್ಗೆ ಯಾವುದೇ ರಾಜಕಾರಣಿಗಳಿಗೆ ಕಿಂಚಿತ್ತೂ ಕಾಳಜಿ ಇಲ್ಲ.
10. ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್‌ಗಳು ದುಡಿಯುವ ಕುಟುಂಬಗಳ ಮನೆಯಲ್ಲಿ ಇರದೆ ಪಂಚಾಯ್ತಿ ಪಿಡಿಒ, ಸದಸ್ಯರ ಬಳಿ ಇವೆ. ದುಡಿದವರಿಗೆ ಸರಿಯಾಗಿ ಕೂಲಿ ಸಿಗುತ್ತಿಲ್ಲ. ಈ ಬಗ್ಗೆ ಕೇಳುವವರು ಯಾರೂ ಇಲ್ಲದಂತಾಗಿದೆ.
11. ಕಳೆದ 10 ವರ್ಷಗಳ ಹಿಂದೆ ಬಿಜಾಪುರದಲ್ಲಿ ಸ್ಥಾಪನೆಯಾದ ರಾಜ್ಯದ ಏಕೈಕ ಮಹಿಳಾ ವಿವಿ ಎಂಬ ಹೆಗ್ಗಳಿಕೆ ಮಹಿಳಾ ವಿಶ್ವ ವಿದ್ಯಾಲಯ ಹೊಂದಿದೆ. ಆದರೆ ಇದು ಸದ್ಯಕ್ಕೆ ಬರೀ ಉತ್ತರ ಕರ್ನಾಟಕದ 15 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಇದನ್ನು ರಾಜ್ಯವ್ಯಾಪ್ತಿಯನ್ನಾಗಿ ವಿಸ್ತರಿಸುವ ನಿಟ್ಟಿನಲ್ಲಿ ಯಾರೂ ಎದೆಗಾರಿಕೆ ತೋರಿಲ್ಲ.
12. ಜಿಲ್ಲೆಯ ಗ್ರಾಮೀಣ ಪ್ರದೇಶದ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಇನ್ನೂ ಬಸ್ ಸೌಕರ್ಯವಿಲ್ಲ. ಜನರು ಐದಾರು ಕಿ.ಮೀ. ವರೆಗೆ ನಡೆದುಕೊಂಡು ಮುಖ್ಯ ರಸ್ತೆಗಳಿಗೆ ಬಂದು ವಾಹನ ಸೌಲಭ್ಯ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ಯಾರೂ ವಿಚಾರಿಸಿಲ್ಲ.
13. ಬಿಜಾಪುರ ಜಿಲ್ಲೆಯಲ್ಲಿ ದ್ರಾಕ್ಷಿ ಪ್ರಮುಖ ಬೆಳೆಯಾಗಿದೆ. ಕೋಟ್ಯಂತರ ರು. ಸಾಲ ಪಡೆದು ದ್ರಾಕ್ಷಿ ಬೆಳೆ ಕೈಗೆ ಬಾರದೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ದ್ರಾಕ್ಷಿ ಬೆಳೆಗಾರರು ಸಾಲದಲ್ಲಿಯೇ ಕೊಳೆತು ಸಾಲಗಾರರಾಗಿಯೇ ಬದುಕು ಸವೆಸಬೇಕಾಗಿದೆ. ಈ ಜನರ ಉತ್ತೇಜನಕ್ಕಾಗಿ ಪ್ಯಾಕೇಜ್ ರೂಪಿಸಲು ಯಾರೂ ಮನಸ್ಸು ಮಾಡಿಲ್ಲ.
14. ಬಿಜಾಪುರ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳೂ ಗೂಬೆ ಹೊಕ್ಕ ಮನೆಯಂತಿವೆ ಇವುಗಳ ಉದ್ದಾರ ಎಂದು?
15. ಬಿಜಾಪುರ ಜಿಲ್ಲೆಯನ್ನು ಹೈದ್ರಾಬಾದ್- ಕರ್ನಾಟಕ ಪ್ರದೇಶದಲ್ಲಿ ಸೇರ್ಪಡೆ ಮಾಡದೇ ಕೈ ಬಿಡಲಾಗಿದ್ದರೂ ಹಿಂದುಳಿದ ಬಿಜಾಪುರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವ ನಿಟ್ಟಿನಲ್ಲಿ ಯಾರೂ ಚಿಂತನೆ ನಡೆಸಿಲ್ಲ.
ಅಭಿವೃದ್ದಿ ವಿಷಯ ಬಂದಾಕ್ಷಣ ಉತ್ತರ ದಕ್ಷಣ ಕರ್ನಾಟಕ ತಾರತಮ್ಯದ ವಿವಾದ ಎಳೆದು ನುಣಿಚಿಕೊಳ್ಳುವ ಇಲ್ಲಿನ ರಾಜಕಾರಣಿಗಳಿಗೆ ಸರ್ವೆ ಸಾಮಾನ್ಯವಾಗಿದೆ. ಇನ್ನೂ ಇತ್ತಿಚಿಗೆ ಈ ಸನಾತನಿಗಳು ಮತ್ತು ನೀತಿಗೆಟ್ಟ ರಾಜಕಾರಣಿಗಳಿಂದಾಗಿ ಸಮಾಜದ ಸಾಮರಸ್ಯದ ಸ್ವಾಸ್ಥ ಕೆಡುತ್ತಾಯಿದೆ ಇದೆ. ಹೊಲಸು ಜಾತಿಯತೆ ರಾಜಕಾರಣ, ನಾಗರಿಕರ ಸತ್ತ ಮನಸ್ಥತಿ, ಹಳ್ಳಿಗರ ಅಮಾಯಕತೆ, ದಾರ್ಮಿಕ ಕಂದಾಚಾರಗಳು ಜೊತೆಗೊಂದಿಷ್ಡು ಸೃಷ್ಟಿಯ ಕೆಟ್ಟ ದೃಷ್ಟಿಯಿಂದಾಗಿ ಇತಿಹಾಸದಲ್ಲಿ ಗೆದ್ದಿದ್ದ ವಿಜಯಪುರ ಇಂದು ಸೋತು ನಿಂತಿದೆ, ಇಲ್ಲಿ ಗೆಲ್ಲಬೇಕಾಗಿರುವುದು ಹಸಿವು ಬಡತನ ಸಮಾನತೆ ಆಗ ಮಾತ್ರ ಇದು ಬಿಜಾಪುರ ವಿಜಯಪುರ ಆಗುತ್ತೆ, ಇಲ್ಲಾ ಅಂದ್ರೆ ????? @ Shivanand Gundanavar

No comments:
Post a Comment