Tuesday, 27 January 2015

ಅರ್ಥ ಒಂದೇ ಇರಬೇಕು

ಹೃದಯದ ಬಡಿತ ಎಷ್ಟಿದ್ದರೂ ಜೀವ ಒಂದೇ ಇರಬೇಕು
ಆಸೆಗಳು ಅಕಾಶದಷ್ಟಿದ್ದರು, ಮನಸ್ಸು ಮಾತ್ರ ಮುಷ್ಟಿಯಲ್ಲಿರಬೇಕು
ಕನಸುಗಳು ಸಾವಿರ ಇದ್ದರು, ಭಾವನೆಗಳು ಒಂದೇ ಇರಬೇಕು
ಗೆಳತಿಯ ನೋಟ ನೂರಿದ್ದರು ಅರ್ಥ ಒಂದೇ ಇರಬೇಕು @ Shivanand Gundanavar

ನನ್ನ ಕನ್ನಡ ನುಡಿ

ನನ್ನ ಕನ್ನಡ ನುಡಿ ನನ್ನ ಕನ್ನಡ ನುಡಿ ದ್ರಾವಿಡ ಸಂಸ್ಕೃತಿಯ ಮುನ್ನುಡಿ
ಪುರಾತನ ಪಳಿ ಉಳಿಕೆಯಲ್ಲಿ ನನ್ನ ಕನ್ನಡ ನುಡಿ ,
ಇಂಡಸ್ ಕಣಿವೆಯಲ್ಲಿ ಉತ್ತುಂಗದ ಮಾರ್ನುಡಿ
ಆರ್ಯರ ತುಳಿತದಲಿ ಬಳಲಿದ ನನ್ನ ಕನ್ನಡ ನುಡಿ,
ಕರಿಸಿಮೇಯ ಬಯಲಲ್ಲಿ ಮತ್ತೆ ಚಿಗುರೊಡೆದು ಹೆಮ್ಮರವಾದ ನನ್ನ ಕನ್ನಡ ನುಡಿ
ನೂರಾರು ಕರಿತಲೆಯಲ್ಲಿ ತಲೆಯೆತ್ತಿ ವಿಜ್ರುಂಬಿಸಿದ ನನ್ನ ಕನ್ನಡ ನುಡಿ
ಕನ್ನಡ ತಲೆಗಳಲ್ಲಿ ತಲೆ ಎತ್ತಿದ್ದ ಸಾವಿರಾರು ಕಲೆ ಕೃತಿಗಳ ಹೊನ್ನುಡಿ
ಆಗಿಹೋದವು ಉತ್ತುಂಗದ ತಲೆಗಳ ಇತಿಹಾಸ
ಇಂದು ಬಂದಿದೆ ಪರ ತಲೆಗಳ ನಡುವೆ ಕನ್ನಡ ತಲೆ ತರಗೆಲೆ
ಆದರು ಮರೆತಿಲ್ಲ ನೀವೆಷ್ಟು ನಮಗೆ, ಆದರು ವಿಷಾದನೀಯ
ಮತ್ತೊಮ್ಮೆ ಮಂದಹಾಸ ಮೂಡುವದು ಎಂದು? ನುಡಿ ನನ್ನ ಕನ್ನಡ ನುಡಿ
ಮರೆಯಬೇಡ ಕರಿ ಮಣ್ಣಿನ ಕರಿತಲೇ ನುಡಿ ನಮ್ಮದು ಕನ್ನಡ ನುಡಿ
ನೀನು ಇಂದೆದ್ದರೆ ಜಗತ್ತಿಗೆ ಅಂದಿನ ನುಡಿ ಆಗುವದು ಇಂದಿನ ಹೊನ್ನುಡಿ
ನುಡಿ ಇದು ನಮ್ಮ ಕನ್ನಡ ನುಡಿ

ಮುಕ್ಯವಲ್ಲ

ಜೀವನದ ಪ್ರತಿಯೊಂದು ವಿಷಯಗಳು ಮುಕ್ಯವಲ್ಲ
ಆದ್ರೆ ಮುಕ್ಯವಾದ ವಿಷಯಗಳನ್ನೆಲ್ಲ ಮನಸ್ಸಿನಲ್ಲಿ ಇಟ್ಟುಕೊಳ್ಳೋಕೆ ಆಗಲ್ಲ
ಇಟ್ಕೊಂಡಿರೋ ವಿಷಯಗಳೆಲ್ಲ ಮುಕ್ಯವಲ್ಲ
ಮುಕ್ಯವಾದ ಎಲ್ಲ ವಿಷಯಗಳು ಮನಸ್ಸಿನ್ನಲ್ಲಿ ಇರಲ್ಲ
ಹೆಸರಿಲ್ಲದೆ ಇರೋ ವಿಷಯಗಳಾವು ಇಲ್ಲ
ಹೆಸರಿದ್ದರೆ ಅವುಗಳಿಗೆ ಭಾವನೆ ಇರುತ್ತೆ
ಭಾವನೆ ಇದ್ದರೆ ಅದಕ್ಕೊಂದು ಬಿಂಭ ಇದ್ದೆ ಇರುತ್ತೆ
ಇಲ್ಲದಿದ್ದರೆ ಅದು ನಮ್ಮನ್ನು ಪ್ರೇತವಾಗಿ ಕಾಡುತ್ತೆ
ವಿಚಿತ್ರವಾದರೂ ಇದೆಲ್ಲ ಸತ್ಯ..ಇದನ್ನು ಅರ್ಥ ಮಾಡಿಕೊಂಡಾತ ಎಂದೆಂದೂ ನಿತ್ಯ @shivanand Gundanavar

ನನ್ನ ರೊಟ್ಟಿ

ಕೈಯಲ್ಲಿ ಮುರ್ದೋದ ರೊಟ್ಟಿ ಇತ್ತು ಅದನ್ನ ನೋಡಿ ನಿಟ್ಟುಸಿರು ಬಿಡ್ತಾ - ತಲೆ ಎತ್ತಿ ಆಕಾಶದ ಕಡೆಗೆ ಒಮ್ಮೆ ನೋಡಿದೆ
ಅಲ್ಲಿ ಚಂದ್ರ ಕೂಡಾ ಮುರ್ದೊಗಿದ್ದ, ರೊಟ್ಟಿ ನನ್ನ ಬಾಳನ್ನ ಪ್ರತಿ ಬಿಂಬಿಸಿದರೆ, ಚಂದ್ರ ಇಡಿ ಜಗತ್ತನೇ ಪ್ರತಿ ಬಿಂಬಸ್ತಾ ಇದ್ದಾ....!!!

ಗುರಿ ಮುಟ್ಟಲಾದಿತೆ

ನನ್ನ ದಾರಿಯಲ್ಲಿ ನಾನು ಏಕಾಂಗಿ, ನನ್ನ ಕಸುಗಳೇ ನನಗೆ ದಾರಿಯಿಲ್ಲಿ, ನೀನೆಂಬ ಸುನಾಮಿ ಅಪ್ಪಳಿಸಿ ದಾರಿಯೆಂಬ ನನ್ನ ಕನಸುಗಳು ಚಿದ್ರವಾದವು, ಇನ್ನೆಲ್ಲಿ ನನ್ನ ಪಯಣ ಮುರುಕು ಮನಸ್ಸಿನಲ್ಲಿ - ಹರಕು ಕನಸಿಟ್ಟುಕೊಂಡು ಗುರಿ ಮುಟ್ಟಲಾದಿತೆ?? @ Shivanand Gundanavar 

ನೂರಾರು ಭಾವನೆಗಳು

ತೊರೆಯ ಮೇಲೆ ತೇಲಿ ಬರುವ ನೂರಾರು ಭಾವನೆಗಳು
ಸಮುದ್ರವೆಂಬ ಅಂತರಾಳದ ಮಧ್ಯದಿಂದ ಬರುವ ಈ ಭಾವನೆಗಳು
ಬೇರೆಯವರ ಮನಕ್ಕೆ ತಟ್ಟಿದರೆ ಅವು ದಡ ಮುಟ್ಟಿದಂತೆ
ಇಲ್ಲವಾದರೆ ಮನದ ಮದ್ಯದಲ್ಲೆ ಚಿದ್ರವಾಗಿ ಬಿದ್ದಂತೆ
ಒಂದು ಸತಿ ಭಾವನೆಗಳು ಚಿದ್ರವಾದರೆ ಮನದ ಮೂಲೆಯಲ್ಲಿ ಅವು ಕೊರೆಯುತ್ತ ಜೊತೆಗೆ ನಮ್ಮನ್ನು ಕೋಳೆಸುವದು.......

ಬಾವನೆಯೇ ಸತ್ತೊಹೊಗಿವೆ

ಭಾರವಾದ ಹೃದಯದಿಂದ ಕುಳಿತೆ ಬರೆಯಲು ಕವಿತೆಯೊಂದು
ಬಾವನೆಯೇ ಸತ್ತೊಹೊಗಿವೆ ಏನು ಬರೆಯಲಿ ಇಂದು
ಕಣ್ಣು ಕಾಣುತ್ತಿವೆ ಆದರೆ ತಿಳಿಯುತ್ತಿಲ್ಲ
ಕೈಗೆ ಹತ್ತಿರವಿದ್ದರೂ ಸಿಗುತ್ತಿಲ್ಲ
ತುಮುಲದಿಂದ ಮನಸ್ಸು ವಿಹಲ್ವಗೊಂಡಿದೆ!
ಶಕ್ತಿ ಇದ್ದರು ದೇಹ ನೆಲ ಕಂಡಿದೆ
ಅಂತಃ ಶಕ್ತಿ ಕುಗ್ಗಿದೆ ಸಹನೆ ಸತ್ತಿದೆ ವಿಚಾರ ಶಕ್ತಿ ಉರಿದು ಹೋಗಿದೆ !
ಏಕೆ ಹೀಗಾಗಿದೆ?
ಕಾರಣ, "ನಿನ್ನಲ್ಲಿ ಭಾವನೆಗಳೇ ಇಲ್ಲ!
ಇನ್ನು ಹೇಗೆ ನಿನ್ನಲ್ಲಿ ಜೀವಂತಿಕೆ ಇರಲು ಸಾದ್ಯ!
ಸತ್ತು ಹೋದ ನಿನ್ನ ಭಾವನೆಗಳಿಗೆ ಜೀವ ಕೊಡು,
ಆಗ ನಿನ್ನಲ್ಲಿ ಕನಸುಗಳು ಎಂಬ ಜೀವಂತಿಕೆ ಸೆಲೆ ನಿನ್ನಲ್ಲಿ ಪುಟಿಯುವದು
ನಿನ್ನ ಸಕಲ ಶಕ್ತಿಗಳು ವಿಜ್ರುಂಬಿಸಿ ನಿನ್ನ ಕವನವನ್ನ ಪೂರ್ಣ ಮಾಡುವವು" . @ Shivanand Gundanavar

ಗಂಡೆ ದಿಕ್ಕಾರವಿದೆ ನಿನಗೆ



ಹೆಣ್ಣಿನ ರಕ್ತ ಮಾಂಸದ ಮುದ್ದೆ ಕೂಗಿ ಕೂಗಿ ಹೇಳುತ್ತಿದೆ
ಅಯ್ಯೋ ಗಂಡೆ ದಿಕ್ಕಾರವಿದೆ ನಿನಗೆ ದಿಕ್ಕಾರವಿದೆ
ಹುಚ್ಚು ಗಂಡೆ ತಿನ್ನು ಇನ್ನೂ ಕಿತ್ತು ತಿನ್ನು ನನ್ನನ್ನ
ಯಾವ ಮೃಗಕ್ಕಿಂತ ನಿನೇನು ಕಡಿಮೆ
ಹೆಣ್ಣೆಂಬ ಯೋನಿಗೆ ಬೆಂಕಿ ಇಟ್ಟು ಬಿಡು ಇನ್ನೆಂದು ಬರೇನು ಈ ಲೋಕದ ಕಡೆಗೆ


ಸಾವಿನ ಪರದೆಯ ಹಿಂದೆ ಸತ್ಯ ಅಸತ್ಯಗಳ ಹೊಡೆದಾಟ
ನೀಚ ಮನುಷ್ಯನ ಮೆದಳು ಅಯ್ಯೋ ನಿನೆಂತ ಕಿಚಕ
ಸೀರೆಯ ಸೆರಗಿನಿಂದ ಬಚ್ಚಿಟ್ಟೆ ಧರ್ಮದ ಹೆಸರಲ್ಲಿ ಪರದೆ ಎಳದೆ
ಸಮಾಜದ ಹೆಸರಲ್ಲಿ ಬಂದಿಸಿದೆ ಸಂಬಂದದ ಹೆಸರಲ್ಲಿ ಸೋಲಿಸಿದೆ ಈಗ ಕಾಮದ ಹೆಸರಲ್ಲಿ ಸಾಯಿಸುತ್ತಿದ್ದಿಯಾ

ದೇವರ ಹೆಸರಲ್ಲಿ ಬಿಟ್ಟಿರಿ ನನ್ನನ್ನು ಕಾಮದ ಹೆಸರಲ್ಲಿ ಕಚ್ಚಿ ತಿಂದಿರಿ
ದರ್ಮದ ಹೆಸರಲ್ಲಿ ಹೊರಗಿಟ್ಟಿದಿರಿ ನನ್ನನ್ನು ಕಾಮದ ಹೆಸರಲ್ಲಿ ಒಳಗೆಳದಿರಿ ನನ್ನನ್ನು
ತೂ ದಿಕ್ಕಾರವಿರಲಿ ನಿಮ್ಮ ದರ್ಮಕ್ಕೂ ದೇವರಿಗೂ
ಅಪ್ಪನನ್ನು ತಬ್ಬಿದೆ ಮಗನನ್ನು ತಬ್ಬಿದೆ ನೀ ಹುಟ್ಟಿಸಿದ ಸಂಭಂದಗಳೆಲ್ಲ ಈಗ ತಬ್ಬಲು ಬಂದಿವೆ
ಸತ್ತ ನನ್ನ ಕಳೆಬರದಲ್ಲೂ ಕಾವನ್ನು ಹುಡುಕುವ ನಿನ್ನ ನೀಚ ಕಾಮಕ್ಕೆ ಇಲ್ಲ ಇನ್ನೂ ಉಳಿವಿಲ್ಲ ಇನ್ನೂ !! @Shivanand Gundanavar

ನೆನಪು ಮಾತ್ರ

ಹಸಿರಾದ ಬಳ್ಳಿಯು ಕಾಲಿಗೆ ತೊಡೆರು ಎಂದು ಸುಟ್ಟುಹಾಕಿದೆ ಅಂದು
ಇಂದು ಆ ಸುಟ್ಟ ಬಳ್ಳಿಯಿಂದ ದ್ರಾಕ್ಷಿಯ ಗೊಂಚಲು ಕೇಳಿದರೆ ಸಿಕ್ಕಿತೆ?
ಹಾಗೆಯೆ ಮೌನದಲ್ಲಿ ಕೊಂದ ಪ್ರೀತಿಯು ಮನಸ್ಸಿನಲ್ಲಿ ಕೇಳಿದರೆ ಸಿಕ್ಕಿತೆ?
ಹೇಗೆ ವೃದ್ದೆಯ ಪಾಲಿಗೆ ಯೌವ್ವನ ಬರಿ ನೆನಪೋ
ಹಾಗೆಯೆ ಸತ್ತ ನನ್ನ ಪ್ರೀತಿಯ ಕನಸುಗಳು ಇನ್ನು ನೆನಪು ಮಾತ್ರ! @ Shivanand Gundanavar

ಎಕಾಂಗಿ ಪಯಣಿಗ



ಬದುಕಿನ ದಾರಿಯಲ್ಲಿ ಎಕಾಂಗಿ ಪಯಣಿಗನಾಗಲು ನಾನೊಲ್ಲೊ.
ಆದರೆ ಜೀವನ ವಿಧಿಯಾಟದಿ ಸಿಲುಕಿ ನಡೆಯಬೇಕಾಗಿದೆ.
ನನ್ನ ನೆನಪಿನರಮನೆಯ ದೊರೆಸಾನಿ ಅಂದು ನೀನು
ಇಂದು ಕೊಳೆತು ನಾರುತ್ತಿದೆ ನಿನ್ನ ನೆನಪುಗಳ ಜೊತೆ ಹೇಳಲೆನು


ಸಿಹಿ ನೆನಪುಗಳ ಮೆಲುಕು ಹಾಕುತ್ತಾ, ಹಳೆ ನೆನಪುಗಳ ಮರೆಯುತ್ತ
ಕಣ್ಣಂಚಲ್ಲಿ ಕಂಬನಿಯ ತುಂಬಿ ನಡೆದಿಹೆನು ನಾನು.
ಭಾರವೆನಿಸಿದೆ ಮನವು ಹಳೆಯ ನೋವುಗಳ ತುಂಬಿಕೊಂಡು.
ಪ್ರೀತಿಯ ಆಸರೆಯ ಬಯಸುತ್ತಾ, ನೆಮ್ಮದಿಯ ಕಾಣದ ಕೈಯ ಹುಡುಕುತ್ತಾ,


ಹೊರಟಿಹೆನು ಕಾಣದೂರಿಗೆ, ಮರಳಿ ಪ್ರೀತಿಯ ಮನಸುಗಳೆಡೆಗೆ.
ನಗಲು ಬಯಸಿದೆ ಮನವು ನೋವ ಮರೆಸಿ, ಕಾದು ಕುಳಿತಿದೆ ಪ್ರೀತಿ ಬಯಸಿ.
ಬಾ ಬೇಗ ಅಭೀಸಾರಿಕೆ ತುಮುಲದಿಂದಿರುವ ಮನದಲಿ
ಪ್ರೀತಿಯ ಹೊನಲು ಹರಿಸು ಬಾ ಕಾದಿರುವೆ ನಿನಗಾಗಿ ಬಕ ಪಕ್ಷಿಯ ಹಾಗೇ!!!

ಚಾಲುಕ್ಯರು

ಚಾಲುಕ್ಯರು : ವೈಷ್ಣವರ(ಆರ್ಯರ) ಹೆಡೆಮುರಿ ಕಟ್ಟಿ ಅಖಂಡ ಕರುನಾಡಲ್ಲಿ ಸ್ವತಂತ್ರವಾಗಿ ಅಳಿದವರಲ್ಲಿ ಚಾಲುಕ್ಯರು ಮೊದಲಿಗರು. ನಮ್ಮತನ, ಸ್ವಾಭಿಮಾನ, ಸಂಸ್ಕೃತಿ ಮತ್ತು ಈ ನೆಲ ಜಲದ ಅನಪೆಕ್ಷಿತ ಪ್ರಭುಗಳಾಗಿ ಇವರುಗಳು ಮೆರೆದವರು. ಈಗಿನ ಮಹಾರಾಷ್ಟ್ರ ಅಂದ್ರಪ್ರದೇಶ್ ಮತ್ತು ಗುಜರಾತಗಳಲ್ಲಿ ಕನ್ನಡಿಗರ ಕೀರ್ತಿ ಪತಾಕೆಯನ್ನ ಹಲವು ಶತಮಾನಗಳವೆರೆಗೂ ನಿರಂತರವಾಗಿ ಹಾರಿಸಿದ್ದು ಇದೆ ನಮ್ಮ ಚಾಲುಕ್ಯರು. ಚಾಲುಕ್ಯರ ಸೈನ್ಯದ ಹೆಸರೇ ಕರ್ನಾಟಕದ ಬಲ ಎಂಬುದಾಗಿತ್ತು. ಉತ್ತರದ ನರ್ಮದೆಯಿಂದ ಹಿಡಿದು ಇಂದಿನ ಕಾವೇರಿಯವರೆಗೂ ಕನ್ನಡ ದೇಶವು ವಿಶಾಲವಾಗಿ ಹರಡಿತ್ತು. ಆರ್ಯರ ದಬ್ಬಾಳಿಕೆಯನ್ನ ವ್ಯವಸ್ಥಿತವಾಗಿ ಹತ್ತಿಕ್ಕಿ ಮಾಲ್ವ, ಲಾಟ ಪ್ರತಿಹಾರರು ಮತ್ತು ಗುರ್ಜರ ಸದ್ದಡಗಿಸಿ ಕನ್ನಡ ದೇಶದಲ್ಲಿ ಶಾಂತಿಯಿತವಾಗಿ ಹಲವಾರು ಶತಮಾನಗಳವರೆಗೂ ಕಾಪಾಡಿಕೊಂಡು ಬಂದವರು. ಉತ್ತರದಲ್ಲಿ ಗುಜರಾತಿನ ಮೂಲೆಯಲ್ಲಿ ಮುಸ್ಲಿಮರ ದಾಳಿಯನ್ನು ಸದೆಬಡಿದು ಕನ್ನಡಿಗರ ಕೀರ್ತಿ ಪತಾಕೆಯನ್ನ ದಶ ದಿಕ್ಕುಗಳಲ್ಲಿ ಮಾರ್ದನಿಸುವಂತೆ ಮಾಡಿದವರು ಈ ನಮ್ಮ ಚಾಲುಕ್ಯರು. ದ್ರಾವಿಡ ಶೈವ ಸಂಸ್ಕೃತಿಯನ್ನ ಎತ್ತಿ ಹಿಡಿದು ನಮ್ಮ ಮೂಲ ಸಂಸ್ಕೃತಿಯನ್ನ ಕಾಪಾಡಿದವರು ಈ ಚಾಲುಕ್ಯರು. ನರ್ಮದಾ ನದಿಯ ತಟದಲ್ಲಿ ಉತ್ತರದ ಪರಮೇಶ್ವರ ಎಂದು ಮೆರೆಯುತ್ತಿದ್ದ ಆರ್ಯರ ಹರ್ಶವರ್ದನನ ಸೋಲ್ಲನ್ನದಗಿಸಿ ಪರಮೇಶ್ವರ ಎಂಬ ಬಿರುದು ಪಡೆದವರು ಈ ಚಾಲುಕ್ಯರು. ಅಂತಹ ಸಾಮ್ರಾಜ್ಯ ಮತ್ತು ಆ ಅರಸರುಗಳ ಚರಿತ್ರೆಯನ್ನ ಬಂಗಾರದ ಅಕ್ಷದಲ್ಲಿ ಓದಬೇಕಾಗಿದ್ದ ನಾವುಗಳು ಇಂದು ಅದು ಬಿಟ್ಟು ಎಲ್ಲಿನವನೋ ಆದ ಚಂದ್ರಗುಪ್ತ ಚಾಣಕ್ಯ ಶಿವಾಜಿ ಪ್ರತಾಪ್ ಹೀಗೆ ಹಲವಾರು ಪರಕೀಯರ ಹೇರಿಕೆಯಿಂದಾಗಿ ನಮ್ಮ ನಾಡ ಪ್ರಭುಗಳ ಸಂಸ್ಕೃತಿ ಜೊತೆಗೆ ನಮ್ಮ ಹಿರಿಮೆ ಸವೆದು ಹೋಗ್ತಾ ಇರೋದು ವಿಷಾದನೀಯ. 

ನಿಜದ ಅನುಬವ

ಗೆಳೆಯರೆ ನಿನ್ನೆ ನನಗಾದ ಒಂದು ಅನುಬವವನ್ನ ನಿಮ್ಮೊಂದಿಗೆ ಹಂಚಿಕೊಳ್ಳುವೆ : ನಿನ್ನೆ ನನಗಾದ ಆ ಅನುಭವ ನಮ್ಮ ಬಸವಾದಿ ಶರಣರ ಮೇಲಿದ್ದ ಅಭಿಮಾನ ನೂರ್ಮಡಿಯಾಯಿತು. ನಿನ್ನೆ ಸುಗ್ಗಿ ಹುಗ್ಗಿ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನ ಸಂಕ್ರಾಂತಿಯ ಪ್ರಯುಕ್ತ ನಮ್ಮ ಘನ ಸರ್ಕಾರ ಕಲಾ ಗ್ರಾಮದಲ್ಲಿ ಹಮ್ಮಿಕೊಂಡಿತ್ತು.ನಮ್ಮ ನಾಡಿನ ಮೂಲೆ ಮೂಲೆಗಳಿಂದಲೂ ಅನೇಕ ಜಾನಪದ ಕಲಾಕಾರರು ಅಲ್ಲಿ ಮೇಳೈಸಿದ್ದರು, ತಮ್ಮ ತಮ್ಮ ನೆಲದ ಅನೇಕ ಕಲಾಭಿನಯಗಳನ್ನ ಅಲ್ಲಿ ಪ್ರಸ್ಥುತಪಡಸ್ತಾ ಇದ್ದರು. ಸುಮ್ಮನೆ ನನ್ನ ಕಣ್ಣು ಅಲ್ಲಿ ಕುಳಿತಿದ್ದ ಗಡ್ಡಾದಾರಿಯಾಗಿದ್ದ ಸುಮಾರು ನಾಲ್ಕೈದು ಇಳೆವಯ್ಯಸ್ಸಿನ ಮುದುಕರು ಕುಳಿತಿದ್ದ ಕಡೆ ಹೋಯಿತು, ಅವರ ಸೋತ ಕಣ್ಣು, ಮುಖದಲ್ಲಿನ ಅಮಾಯಕತೆ, ತಲೆಮೇಲಿನ ರುಮಾಲು ಉತ್ತರ ಕರ್ನಾಟಕದ ಯಾವುದೋ ಒಂದು ಹಳ್ಳಿಯವರೆಂದು ಕಾಣುತಿತ್ತು. ವಿಷಯ ಏನೆಂದರೆ ಹಸಿರು ರುಮಾಲಿನ ಮೀಸೆ ಬೋಳಿಸಿದ ಅವರು ಪಕ್ಕಾ ಮುಸಲ್ಮಾನರಾಗಿದ್ದರು. ನಾನೇನೋ ಮೊಹರಂನಲ್ಲಿ ಹಾಡುವ ಯಾವುದಾದರು ಹಾಡುಗಳನ್ನ ಹಾಡಲು ಬಂದ್ದಿದ್ದಾರೆಂದುಕೊಂಡೆ . ಹಲವಾರು ಕಲಾಪ್ರದರ್ಶನಗಳಾದ ನಂತರ ಇವರ ಸರದಿಯು ಬಂತು, ಕೈಯಲ್ಲಿ ಯಾವುದೆ ರೀತಿಯ ವಾದ್ಯಗಳಿರಲಿಲ್ಲ ಅವರೆಲ್ಲ ಹೋಗಿ ಮೈಕಿನ ಮುಂದೆ ನಿಂತು ಹಾಡತೊಡಗಿದರು. ಅವರು ಹಾಡುತಿದ್ದ ಹಾಡನ್ನ ಕೇಳಿ ಒಂದು ಕ್ಷಣ ಅವಕ್ಕಾದೆ, ಕಾರಣ ಅವರು ಹಾಡುತ್ತಿದದ್ದು ಕಲ್ಯಾಣದ ನಮ್ಮ ಬಸವಾದಿ ಶರಣರ ಕುರಿತಾಗಿ. ಯಾಕೆ ಇದನ್ನ ಇಲ್ಲಿ ಹೆಳ್ತಾ ಇದಿನಿ ಅಂದ್ರೆ. ಮುಸ್ಲಿಂ ಅಂದ್ರ ದರ್ಮಾಂದರು ಎಂದು ನೋಡುವ ಈ ಕಾಲದಲ್ಲಿ, ನಾನು ಹಿಂದು ನೀನು ಮುಸ್ಲಿಂ ಎಂದು ಈಡಿ ದೇಶವೆ ಎರಡಾಗಿರುವಾಗ, ದರ್ಮದ ಹೇಸರಲ್ಲಿ ರಕ್ತಚೆಲ್ಲುತ್ತಿರು ಸಮಯದಲ್ಲಿ ಇಂತಹ ಸಾಮರಸ್ಯದ ವ್ಯಕ್ತಿಗಳನ್ನ ನೋಡಿದಾಗ ಆಯ್ಚರ್ಯಗೊಳ್ಳದೆ ಇರಲಾಗದು. ತಮ್ಮ ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಜನರಲ್ಲಿ ದರ್ಮದ ಹೇಸರಲ್ಲಿ ದೇಶವನ್ನೆ ಸುಡಲು ಹೊರಟಿರುವ ದರ್ಮಾಂದರಿಗೆ ಈ ವ್ಯಕ್ತಿಗಳು ಪಾಠವಾಗಿ ನಿಲ್ಲುತ್ತಾರೆ. ಎಲ್ಲಿಯ ಬಸವಣ್ಣ ಎಲ್ಲಿಯ ಮಹಮ್ಮದ ಇದೆಲ್ಲವೂ ಇರುವುದು ನಮ್ಮ ಮಣ್ಣಿನ ಗುಣದಲ್ಲಿ, ದರ್ಮಾಂದತೆಯ ಪರದೆಯ ಕಿತ್ತೊಗೆದು ನವ ಕರ್ನಾಟಕದಲ್ಲಿ ಶಾಂತಿಗೀತೆ ಇಂತವರಿಂದಲೇ ಮೊದಲ್ಗೊಳ್ಳಬೇಕು

ನಿನ್ನ ಪ್ರೀತಿಯ ವಿಷದ ಗಿಡ



ನೀ ಬಿಟ್ಟ ಮೇಲೆ ನನ್ನ ಮನದ ಮರುಭೂಮಿಯಲಿ
ಪ್ರೀತಿಯ ಬರಸಿಡಿಲು ಬಡಿದು ಸುಟ್ಟ ಮರದೆದುರು ಕುಳಿತಿದ್ದೇನೆ
ಅಲ್ಲೋ ಇಲ್ಲೋ ಒಂದಿಷ್ಟು ಉಸಿರು ಉಳಿದಿರಬಹುದು
ಜೊತೆಗೊಂದಷ್ಟು ಬರವಸೆಯ ಹಸಿರ ಹಸಿ ಒಳಗಿರಬಹುದು
ಪ್ರಿತಿಯೊಂದರ ಮೊಟ್ಟೆ ತಪ್ಪಿ ಉಳಿದಿರಬಹುದು
ಅರೆಪಕ್ಕದ ಪ್ರೇಮದ ಗೂಡಿಗಾಗಿ ಹುಡುಕುತಿರಬಹುದು!

ಗಾಡ ಸರಿರಾತ್ರಿಯ ಕತ್ತಲೆಯ ನಡುವಲ್ಲಿ ಬೆಚ್ಚಗೆ ಮಲಗಿಹೆನು ನಾನು
ನಿದಿರೆಯು ಏಕೋ ಬಾರದು ನನಗಿನ್ನೂ ಮನದಲ್ಲಿ ಕೂತು ನೀ ಕಾಡುತ್ತಿರುವೆ?
ಕಣ್ಣ ಮುಚ್ಚಿದರೆ ನಿನ್ನ ಕಳೆದ ನೆನಪುಗಳಿಂದು ಕೊಚ್ಚಿ ಕೊಲ್ಲುತ್ತಿವೆ
ಹೇ ನಲುಮೆಯೇ ಏಕೆ ನನ್ನ ಕೊಲ್ಲುವೆ ಮತ್ತೆ ಪ್ರೀತಿಯ ವಿಷವ ಬಿತ್ತಿ
ಥೂ ಮತ್ತೆಂದು ಬರೆಬೇಡ 'ನೀ ಸುಟ್ಟ ಬರಡೆದೆಯಲ್ಲಿ'!

ಈ ಬರಡು ಮರದ ಎದೆಯೊಳಗೆ ಬಿದ್ದ ನಿನ್ನ ಪ್ರೀತಿಯ ಗೊರಲಿಯ ಮಣ್ಣೇ
ಈಗ ಇದರ ವಂಶದ ಕನಸಾಗಿರಬಹುದು ಎಂಬ ಆಶಯ,
ಬರವಸೆಯ ಕಣ್ಣಿನಿಂದ ಹುಡುಕ್ಕುತ್ತಿದೆ ಮತ್ತೊಂದು ಚಿಗುರೆದೆಯ
ಸಾಕಿನ್ನು ಸತ್ತ ನಿನ್ನ ಪ್ರೀತಿಯ ಪ್ರೇತಾತ್ಮಗಳು ಮತ್ತೆಂದು ಕಾಡದಿರಲಿ ನನ್ನ!!
ಹೋಗು ಹೊರಟು ಹೋಗು ಸಾಕಿನ್ನು ತಾಳೆನು
ಮಣ್ಣಾದ ನಿನ್ನ ನೆನಪುಗಳ ಗೋರಿಯ ಮೇಲೆ ಮತ್ತೆಂದು ನೆಡದಿರು ನಿನ್ನ ಪ್ರೀತಿಯ ವಿಷದ ಗಿಡವ!!

ಬಿಜಾಪುರ



ಬಿಜಾಪುರ ಎಂದಾಕ್ಷಣ ನಮಗೆ ಕಾಣುವುದು, ಬಿಜಾಪುರದಲ್ಲಿರುವ 80ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳು, ಬಸವಣ್ಣನ ಜನ್ಮಸ್ಥಾನ, ತಾಳಿಕೋಟಿ ಯುದ್ದ, ಆದಿಲ್ ಶಾಹಿ ಆಡಳಿತ, ಜೋಳದ ರೋಟ್ಟಿ, ಅಲ್ಲಿನ ಸಂಸ್ಕೃತಿ, ಸಾಮರಸ್ಯದ ಬದುಕು, ೫% ಚಳಿ ೪೨ ಬಿಸಿ ಅಲ್ಲಿನ ಬಡತನ ಅಮಾಯಕತೆ, ವಂಶಪಾರಂಪರ್ಯ ರಾಜಕೀಯ, ಆರ್ಥೀಕ ಅಸಮಾನತೆ, ಜಾತಿಯ ವಿಲಕ್ಷಣತೆ, ಉಳ್ಳವರ ದರ್ಪ ಮತ್ತು ಅಲ್ಲಿಯ ಖಡಕ್ ಭಾಷೆ.

ಕರ್ನಾಟಕದ ಅಂತ್ಯಂತ ಹಿಂದುಳಿದ ಜಿಲ್ಲೆ ಬಿಜಾಪುರ ಎಂದರೆ ತಪ್ಪಾಗಲಾರದು. ಅಲ್ಲಿಯ ರಾಜಕೀಯ ಅರಾಜಕತೆ ಜಾತಿಯತೆಯ ಪೆಂಡಭುತದಿಂದಾಗಿ ಅಲ್ಲಿ ಇನ್ನೂ ಬಡತನ ಎಂಬ ಭೂತದ ಕದಂಬಭಾಹು ಸಡಿಲಗೊಂಡಿಲ್ಲ. ಹೆಸರಿಗೆ ಮಾತ್ರ ಇದು ವಿಜಯಪುರ. ಇತಿಹಾಸದ ಪುಟದಲ್ಲಿ ಇದು ಗೆದ್ದಿರಬಹುದು ಆದರೆ ವಸ್ತು ಸ್ಥಿತಿಯಲ್ಲಿ ಅದು ಸೊತಿದೆ ಎನ್ನಬಹುದು.

ಹೈ.ಕ.ಕ್ಕೆ ಸೇರಲಿಲ್ಲ..

ಹೈದ್ರಾಬಾದ್- ಕರ್ನಾಟಕ ಪ್ರದೇಶಕ್ಕೆ ಸೇರ್ಪಡೆಯಾದ ಎಲ್ಲ ಜಿಲ್ಲೆಗಳಿಗಿಂತಲೂ ಬಿಜಾಪುರ ಜಿಲ್ಲೆ ತೀರಾ ಹಿಂದುಳಿದಿದೆ. ಆದರೆ ಹೈದ್ರಾಬಾದ್- ಕರ್ನಾಟಕ ಪ್ರದೇಶಕ್ಕೆ ಗುಲ್ಬರ್ಗ ಸೇರಿದಂತೆ ಅನೇಕ ಜಿಲ್ಲೆಗಳು ಸೇರ್ಪಡೆಯಾಗುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಕೂಗು ವಿಧಾನಸಭೆ, ಪಾರ್ಲಿಮೆಂಟಿನಲ್ಲಿ ಗಟ್ಟಿಯಾಗಿ ಮೊಳಗಲಿಲ್ಲ. ಮೊಳಗಲಿಲ್ಲ ಎನ್ನೂವದಕ್ಕಿಂತ ಮೊಳಗಿಸಲಿಲ್ಲ ಅನ್ನಿ.

ಸರ್ಕಾರ ಬಿಜಾಪುರ ನಗರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ನಿರ್ಧಾರ ಕೈಗೊಂಡಿತ್ತು ಆದರೆ ಇಲ್ಲಿಯ ರಾಜಕಾರಣಿಗಳ ಮತ್ಸದಿತನ ಕೊರೆತೆಯಿಂದಾಗಿ ಅದು ಬೇರೆಡೆಗೆ ಸ್ಥಳಾಂತರಗೊಂಡಿತು.

ಕೆರೆಗೆ ನೀರು ತುಂಬುವ ಕಾರ್ಯ...

ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಗಳು ಹಲವೂ ದಶಕಗಳಿಂದ ಇನ್ನೂ ನಡಿತಾನೆ ಇದೆ ಯಾವಾಗ ಮುಗಿಯುವದೊ ಆ ದೇವರೆ ಬಲ್ಲ.

ತಪ್ಪದ ಕುಡಿವ ನೀರಿ ಬರ...

ಜಿಲ್ಲೆಯಲ್ಲಿ ಕೃಷ್ಣೆ ಬೀಮೆಯಂತಹ ಮಾಹಾ ನದಿಗಳಿದ್ದರೂ ಹನಿ ನೀರಿಗೂ ಹಾಹಾಕಾರವಿದೆ. ರಾಜಕೀಯ ಇಚ್ಚಾಶಕ್ತಿ ಮತ್ತು ಒಗ್ಗಟ್ಟಿನ ಕೊರತೆ ಇಂದಾಗಿ ಜಲ ಕ್ಷಾಮ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಾ ಇದೆ.

ಜನಪ್ರತಿನಿಧಿಗಳೇ ನಿಮ್ಮ ಸಾಧನೆ ಇದೇನಾ?

1. ಪ್ರತಿ ವರ್ಷ ಬರದಿಂದ ತತ್ತರಿಸುತ್ತಿರುವ ಬಿಜಾಪುರ ಜಿಲ್ಲೆಗೆ ಶಾಶ್ವತ ಹಾಗೂ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನವಾಗಿಲ್ಲ.

2. ಉದ್ಯೋಗ ಅರಸಿ ಗೋವಾ, ಮಹಾರಾಷ್ಟ್ರಕ್ಕೆ ಬೆಗಳೂರುಗೆ ತೆರಳುವ ಜನರಿಗೆ ಆರ್ಥಿಕ ಸ್ಥಿತಿಗತಿ ಸುಧಾರಿಸಲು ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ಗುಳೇ ಹೋಗುವವರನ್ನು ತಡೆಯಲು ಉದ್ಯೋಗಾವಕಾಶದ ಸಲುವಾಗಿ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ.

3. ತೋಟಗಾರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥಿತ ನೀರಾವರಿ ಪದ್ಧತಿ ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ.

4. ದೇಶ, ವಿದೇಶದ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಬಿಜಾಪುರದ ವಿಶ್ವವಿಖ್ಯಾತ ಗೋಳಗುಮ್ಮಟ ಐತಿಹಾಸಿಕ ಸ್ಮಾರಕವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ಇನ್ನೂ ಎಷ್ಟು ವರ್ಷಗಳು ಬೇಕು? ಬರೀ ಚುನಾವಣೆ ಭಾಷಣದ ವಿಷಯ ವಸ್ತುವಾಗಿರಬೇಕೇ?

5. ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನರು ಐದಾರು ಕಿ.ಮೀ. ವರೆಗೆ ಅಲೆದು ಖಾಸಗಿ ತೆರೆದ ಬಾವಿ, ಕೊಳವೆ ಭಾವಿಗಳ ನೀರು ತರಬೇಕಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸಲು ರಾಜಕಾರಣಿಗಳು ಇಚ್ಚಾಶಕ್ತಿ ಪ್ರದರ್ಶಿಸಿಲ್ಲ.

6. ಬಿಜಾಪುರ ಮಹಾನಗರಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಘೋಷಣೆ ಮಾಡಿದೆಯಾದರೂ ಅದು ಇನ್ನೂ ಮಹಾನಗರಪಾಲಿಕೆಯಾಗಿ ಮಾರ್ಪಟ್ಟಿಲ್ಲ. ಬರೀ ನಾಮಫಲಕ ಮಾತ್ರ ಬದಲಾಗಿದೆ.

7. ಬಿಜಾಪುರ ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ಘನ ಘೋರವಾಗಿದೆ. ರಾತ್ರಿ ಕೆಲವೇ ಗಂಟೆಗಳ ವರೆಗೆ ಮಾತ್ರ ಗ್ರಾಮೀಣ ಪ್ರದೇಶದಲ್ಲಿ ತ್ರಿಫೇಸ್ ವಿದ್ಯುತ್ ನೀಡಲಾಗುತ್ತಿಲ್ಲ. ಹೊಲದಲ್ಲಿ ಬೆಳೆದ ಪೈರಿಗೆ ಸರಿಯಾಗಿ ನೀರುಣಿಸಲು ಆಗದೆ ವಿದ್ಯುತ್ ಕ್ಷಾಮದಿಂದ ಜನರು ತತ್ತರಿಸಿದ್ದಾರೆ. ಬರೀ ಕೂಡಗಿ ಕಡೆಗೆ ಬೊಟ್ಟು ಮಾಡಿ ತೋರಿಸಿದರೆ ಜ್ವಲಂತ ಸಮಸ್ಯೆಗೆ ತುರ್ತಾಗಿ ಪರಿಹಾರ ಸಿಗುವ ಬಗ್ಗೆ ಯಾರೂ ವಿಚಾರಿಸಿಲ್ಲ.

8. ಬಿಜಾಪುರ ಹೊರ ವಲಯದ ವಿಮಾನ ನಿಲ್ದಾಣದ ಕನಸು ನನಸು ಎಂದು?

9. ಬಿಜಾಪುರ ನಗರದಲ್ಲಿನ 80ಕ್ಕೂ ಹೆಚ್ಚು ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಲು ಯಾವುದೇ ಕ್ರಮವಿಲ್ಲ. ಇದರಿಂದಾಗಿ ಬಿಜಾಪುರ ಜಿಲ್ಲೆಯು ಹಾಳೂರು ಹದ್ದಿನಂತಾಗಿದೆ. ಸ್ಮಾರಕಗಳ ರಕ್ಷಣೆಗೆ ಸರ್ಕಾರ ಮನಸ್ಸು ಮಾಡಿಲ್ಲ. ಈ ಬಗ್ಗೆ ಯಾವುದೇ ರಾಜಕಾರಣಿಗಳಿಗೆ ಕಿಂಚಿತ್ತೂ ಕಾಳಜಿ ಇಲ್ಲ.

10. ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್‌ಗಳು ದುಡಿಯುವ ಕುಟುಂಬಗಳ ಮನೆಯಲ್ಲಿ ಇರದೆ ಪಂಚಾಯ್ತಿ ಪಿಡಿಒ, ಸದಸ್ಯರ ಬಳಿ ಇವೆ. ದುಡಿದವರಿಗೆ ಸರಿಯಾಗಿ ಕೂಲಿ ಸಿಗುತ್ತಿಲ್ಲ. ಈ ಬಗ್ಗೆ ಕೇಳುವವರು ಯಾರೂ ಇಲ್ಲದಂತಾಗಿದೆ.

11. ಕಳೆದ 10 ವರ್ಷಗಳ ಹಿಂದೆ ಬಿಜಾಪುರದಲ್ಲಿ ಸ್ಥಾಪನೆಯಾದ ರಾಜ್ಯದ ಏಕೈಕ ಮಹಿಳಾ ವಿವಿ ಎಂಬ ಹೆಗ್ಗಳಿಕೆ ಮಹಿಳಾ ವಿಶ್ವ ವಿದ್ಯಾಲಯ ಹೊಂದಿದೆ. ಆದರೆ ಇದು ಸದ್ಯಕ್ಕೆ ಬರೀ ಉತ್ತರ ಕರ್ನಾಟಕದ 15 ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಇದನ್ನು ರಾಜ್ಯವ್ಯಾಪ್ತಿಯನ್ನಾಗಿ ವಿಸ್ತರಿಸುವ ನಿಟ್ಟಿನಲ್ಲಿ ಯಾರೂ ಎದೆಗಾರಿಕೆ ತೋರಿಲ್ಲ.

12. ಜಿಲ್ಲೆಯ ಗ್ರಾಮೀಣ ಪ್ರದೇಶದ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಇನ್ನೂ ಬಸ್ ಸೌಕರ್ಯವಿಲ್ಲ. ಜನರು ಐದಾರು ಕಿ.ಮೀ. ವರೆಗೆ ನಡೆದುಕೊಂಡು ಮುಖ್ಯ ರಸ್ತೆಗಳಿಗೆ ಬಂದು ವಾಹನ ಸೌಲಭ್ಯ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ಯಾರೂ ವಿಚಾರಿಸಿಲ್ಲ.

13. ಬಿಜಾಪುರ ಜಿಲ್ಲೆಯಲ್ಲಿ ದ್ರಾಕ್ಷಿ ಪ್ರಮುಖ ಬೆಳೆಯಾಗಿದೆ. ಕೋಟ್ಯಂತರ ರು. ಸಾಲ ಪಡೆದು ದ್ರಾಕ್ಷಿ ಬೆಳೆ ಕೈಗೆ ಬಾರದೆ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ದ್ರಾಕ್ಷಿ ಬೆಳೆಗಾರರು ಸಾಲದಲ್ಲಿಯೇ ಕೊಳೆತು ಸಾಲಗಾರರಾಗಿಯೇ ಬದುಕು ಸವೆಸಬೇಕಾಗಿದೆ. ಈ ಜನರ ಉತ್ತೇಜನಕ್ಕಾಗಿ ಪ್ಯಾಕೇಜ್ ರೂಪಿಸಲು ಯಾರೂ ಮನಸ್ಸು ಮಾಡಿಲ್ಲ.

14. ಬಿಜಾಪುರ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳೂ ಗೂಬೆ ಹೊಕ್ಕ ಮನೆಯಂತಿವೆ ಇವುಗಳ ಉದ್ದಾರ ಎಂದು?

15. ಬಿಜಾಪುರ ಜಿಲ್ಲೆಯನ್ನು ಹೈದ್ರಾಬಾದ್- ಕರ್ನಾಟಕ ಪ್ರದೇಶದಲ್ಲಿ ಸೇರ್ಪಡೆ ಮಾಡದೇ ಕೈ ಬಿಡಲಾಗಿದ್ದರೂ ಹಿಂದುಳಿದ ಬಿಜಾಪುರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವ ನಿಟ್ಟಿನಲ್ಲಿ ಯಾರೂ ಚಿಂತನೆ ನಡೆಸಿಲ್ಲ.

ಅಭಿವೃದ್ದಿ ವಿಷಯ ಬಂದಾಕ್ಷಣ ಉತ್ತರ ದಕ್ಷಣ ಕರ್ನಾಟಕ ತಾರತಮ್ಯದ ವಿವಾದ ಎಳೆದು ನುಣಿಚಿಕೊಳ್ಳುವ ಇಲ್ಲಿನ ರಾಜಕಾರಣಿಗಳಿಗೆ ಸರ್ವೆ ಸಾಮಾನ್ಯವಾಗಿದೆ. ಇನ್ನೂ ಇತ್ತಿಚಿಗೆ ಈ ಸನಾತನಿಗಳು ಮತ್ತು ನೀತಿಗೆಟ್ಟ ರಾಜಕಾರಣಿಗಳಿಂದಾಗಿ ಸಮಾಜದ ಸಾಮರಸ್ಯದ ಸ್ವಾಸ್ಥ ಕೆಡುತ್ತಾಯಿದೆ ಇದೆ. ಹೊಲಸು ಜಾತಿಯತೆ ರಾಜಕಾರಣ, ನಾಗರಿಕರ ಸತ್ತ ಮನಸ್ಥತಿ, ಹಳ್ಳಿಗರ ಅಮಾಯಕತೆ, ದಾರ್ಮಿಕ ಕಂದಾಚಾರಗಳು ಜೊತೆಗೊಂದಿಷ್ಡು ಸೃಷ್ಟಿಯ ಕೆಟ್ಟ ದೃಷ್ಟಿಯಿಂದಾಗಿ ಇತಿಹಾಸದಲ್ಲಿ ಗೆದ್ದಿದ್ದ ವಿಜಯಪುರ ಇಂದು ಸೋತು ನಿಂತಿದೆ, ಇಲ್ಲಿ ಗೆಲ್ಲಬೇಕಾಗಿರುವುದು ಹಸಿವು ಬಡತನ ಸಮಾನತೆ ಆಗ ಮಾತ್ರ ಇದು ಬಿಜಾಪುರ ವಿಜಯಪುರ ಆಗುತ್ತೆ, ಇಲ್ಲಾ ಅಂದ್ರೆ ????? @ Shivanand Gundanavar

ಬಿಂಭಕ್ಕೊಂದು ಜೀವ



ಪ್ರತಿಯೊಂದು ಹೃದಯದ ಭಾಷೆಗೂ ಜೀವವಿದೆ
ಆ ಜೀವಕ್ಕೆರಡು ಕನಸುಗಳಿವೆ,
ಆ ಕನಸುಗಳನ್ನ ನನಸಾಗಿಸಲು ಹುಚ್ಚಾಸೆಗಳಿವೆ
ಆ ಆಸೆಗಳಲ್ಲಿ ಕಲ್ಪನೆಗಳಿವೆ
ಆ ಕಲ್ಪನೆಗಳಲ್ಲಿ ಭಿಂಬಗಳಿವೆ
ಆದರೆ ಆ ಭಿಂಬಗಳಿಗೆ ಜೀವವೇ ಇಲ್ಲ!!
ಬಾ ಗೆಳತಿ ನಿನಾಗುವೆಯಾ ಜೀವ ಆ ಭಿಂಬಗಳಿಗೆ?? @ Shivanand Gundanavar

ಭಾವನೆಯ ತಂತಿಗಳು



ವಿಲಿನಗೊಂಡವು ನನ್ನ ಕನಸಿನ ಹೊಸ ರಾಗಗಳು
ಅದರಿಂದ ಹೊಮ್ಮಿದವು ಭಾವನೆಯ ತಂತಿಗಳು
ಮೀಟಿದ ತಂತಿಗಳ ನಾದಕ್ಕೆ
ಕುಣಿಯಿತು ನನ್ನೆದೆ ತಾರಕಕ್ಕೆ
ಮನದ ಮೂಲೆಯಲಿ ಕುಳಿತಿದ್ದ ಅರೆಗನಸುಗಳು
ನಿನ್ನನ್ನು ನೋಡಿ ಹೊಸಗನಸಿನಲಿ ಮಿಂದೆದ್ದ ಹಂಸಗಳಂತಾದವು
ಬಾ ಬೇಗ ನನ್ನೆದೆಗೆ ಬಿಂಭವಾಗಿ ಅಭಿಸಾರಿಕೆ