Monday, 5 November 2012

ಾನನ ಜೊತೆಗೆ ನನ್ನ ಕವನ

ಕಾನನ ಜೊತೆಗೆ ನನ್ನ ಕವನ  

ಹಾಡು ಬರೆಯಲೆಂದು ಹೋದೆ ಕಡಿದಾದ ಕಾಡಲ್ಲಿ
ಕಲ್ಪನೆಯ ಜಾಡು ಬಿಟ್ಟು ವಾಸ್ತವದ ಅರಿವಿದೆ ಅಲ್ಲಿ

ಕೋಕಿಲ ಗಿಳಿ ಗೊರವಂಕಗಳ ಮಧುರ ಗಾನ
ಜಿಂಕೆ ಕಡವೆ ಹೆಬ್ಬುಲಿ ಚಿರತೆಗಳ ಆವಾಸಸ್ಥಾನ

ಜುಳು ಳುಳು ಹರಿಯುವ ಜರಿಯ ಮಂಜುಳ ಗಾನ
ಫಲ ಪುಷ್ಪಗಳ ಪರಾಗದ ವಾಸನೆಯ ಹರಿವಾಣ

ಸ್ವಾರ್ಥ ಮೋಸ ವಂಚನೆಯ ವಾಸನೆ ಅಲ್ಲಿಲ್ಲ
ನೈಜತೆಯ ಮೇಲೆ ಹೊರಟಿದೆ ಅಲ್ಲಿರುವ ತರು ಲತೆಗಳೆಲ್ಲ

ಕವನದ ಕೊನೆಯ ಹಾದಿಯಲ್ಲಿ ಬಂದಿದ್ದೆ ನಾನು
ಅಲ್ಲಿ ದುತ್ತೆಂದು ಪ್ರತ್ಯಕ್ಷ್ಯವಾಯಿತು ಮರಕಡಿಯುವ ಮಶೀನು

ಮುಗಿಯುತು ಇನ್ನೆಲ್ಲಿ ಈ ನನ್ನ ಕವನಕ್ಕೆ ಕೊನೆ
ಮಾನವನ ಧುರಾಸೆಗೆ ಬಲಿಯಾಯಿತು ಈ ಕಾನನ
ಜೊತೆಗೆ ನನ್ನ ಕವನ

ಶಿವಾನಂದ್ ಗುಂಡಾನವರ











Thursday, 3 May 2012

ಕಂಡ ಕಂಬನಿ


ಕಾರಣಗಳಿಲ್ಲದೆ ಬಂತು ಕಂಬನಿಯ ತುಂಡೊಂದು
ಮನಸ್ಸು ವಿಹಲ್ವಗೊಂಡು ಸುರಿಸಿತು ಕಣ್ಣಿರು ಒಂದೊಂದು

ಏಕೋ ಏನೋ ತಿಳಿಯೆ ನಾ ನೀ ಮನಸ್ಸಿನ ಛಾಯೆ
ಒಳಗೆ ಕೊರಗುತ್ತಿರುವ ಕಾಣದ ಮನಸ್ಸಿನ ಗಾಯ

ಮನಸ್ಸಿನೋಳಗಡೆ ಸ್ಮಶಾನ ಮೌನದ ವಾಸನೆ
ಆದ ಘಾಯದ ಗುರುತಿನ ನೋವಿನ ತುಲನೆ

ಒಂಚನೆ ಮೋಸಾ ಕಪಟದ ಅರಿವಿಲ್ಲ ನನ್ನ ಮನಸ್ಸಿಗೆ
ಆದರು ನನ್ನ ಹೃದಯಾಂತರಾಳದಿ ಏನೋ ಕೊರಗಿದೆ

ತಿಳಿಯುತ್ತಿಲ್ಲ ಆ ಕೊರಗಿಗೆ ಕಾರಣ ಏನೆಂದು
ಈ ಕಾಣದ ಕೊರಗಿಗೆ ಕೊನೆ ಇನ್ನೆಂದು

Sunday, 29 April 2012

ಒಲುಮೆಯ ಗುಡಿಸಲು



ನನ್ನ ಕಲ್ಪನೆಯ ಗುಡಿಸಲು 

ಆಕಾರವಿಲ್ಲದ ಕಲ್ಪನೆಗಳನ್ನು ಕಟ್ಟಿಹೇನು ನನ್ನ ಮನದ ಗುಡಿಸಿಲಿನಲ್ಲಿ
ಕಲ್ಪನೆಯಲ್ಲಿರುವ ಭಾವದ  ಬಿಂಬವೇ ಆ ಗುಡಿಸಲಿಗೆ ಅಧಾರ  ಅಲ್ಲಿ

ಬಯದಲ್ಲಿರುವೇನು ಎಲ್ಲಿ ಬಿರುಗಾಳಿಗೆ ನನ್ನ ಗುಡಿಸಲು ಸಿಕ್ಕಬಹುದೆಂದು
ಬಂದಿದ್ದೆಲ್ಲ ಬರಲಿ  ಅದಕ್ಕೆ ಭಾವದ ರಕ್ಷಣೆ ಇರುಹುದಿಂದು

ಕಡುರಾತ್ರಿಯ ಕತ್ತಲಿನ ಚಂದ್ರ ಕಂಡಂತೆ ನನ್ನ ಕಲ್ಪನೆಗಳು
ಕನಸಿನ ಹಂದರಕ್ಕೆ ಇವುಗಳೇ ಜೀವದ ತಂತುಗಳು

ನನ್ನ ಕಲ್ಪನೆಯ ಮನದ ಮನೆಯಲಿ  ತುಮಲದ ಹೋಗೆ ಎದ್ದರೆ
ಭಾವದ ಮೊಗ ಮುಸುಕಾಗಿ ಮರೆಯಾದರೆ ನನಗೆ ತೊಂದರೆ

ಬಿರುಗಾಳಿಯಿಲ್ಲದಿದ್ದರು ಬೀಳುವುದು ನನ್ನ ಮನದ ಗುಡಿಸಲು
ಕಲ್ಪನೆಗಳು ಹಾರಿ ಹೋದ ಮೇಲೆ ಅಲ್ಲೇನಿದೆ ನನಗೆ ಪವಡಿಸಲು @ Shivanand Gundanavar

Sunday, 25 March 2012

ನೀ ನಾ ಒಳ್ಳೆಯವಳು ??

ನೀ ನಾ ಒಳ್ಳೆಯವಳು 
ಹೇಳು ನೀನು ಒಳ್ಳೆಯವಳು ಎಂದು ನಾನೇಕೆ ಹೇಳಲಿ
ನಿಷ್ಕಲ್ಮಶ ಮನಸಲ್ಲಿ ಹಾಲಾಹಲದ ವಿಷವನಿತ್ತವಳು ನೀನು
ನನ್ನ ಕನಸಿಗೆ ಕಾಣದ ದಾರಿಯಲಿ  ಗೋರಿ ಕಟ್ಟಿದವಳು ನೀನು
ನನ್ನ ಕಲ್ಪನೆಯನ್ನೇ ಚಿದ್ರ ವಿಚಿದ್ರವಾಗಿ ಹೊಸೆದು ಹಾಕಿದವಳು ನೀನು

ಹೇಳು ಹೇಗೆ ಹೇಳಲಿ ನಾನು ನೀನು ಒಳ್ಳೆಯವಳು ಎಂದು

ನನ್ನ ಭಾವನೆಗಳಿಗೆ ಜೀವವಾಗಿ ನೀನು ಬಂದೆ
ಕಲ್ಪನೆ ಇಲ್ಲದ ಬರಡಾಗಿದ್ದ ಈ ಮನಕೆ ಜೀವ ಜಲವಾಗಿ ಬಂದೆ
ಅಸೆಗಳ ಅರಿವಿಲ್ಲದಿದ್ದ ನನಗೆ ಬೊಗಸೆ ತುಂಬಾ ಆಸೆಗಳ ತಂದವಳು ನೀನು
ಕನಲಿ ಹೋದ ಮನಕೆ ಜೇನಿನ ಹನಿಯಾಗಿ ಬಂದೆ
ಆದರೆ ಇನ್ನೇನು ನಾನು ನಿನ್ನವನಾಗ ಬೇಕೆನ್ನು ಅಷ್ಟರಲ್ಲಿ ಎಲ್ಲಿ ಹೋದೆ ನೀನು?

ಹೇಳು ಹೇಗೆ ಹೇಳಲಿ ನಾನು ನೀನು ಒಳ್ಳೆಯವಳು ಎಂದು

ಮನದ ಮರುಭೂಮಿಯಲ್ಲಿ ಪ್ರೀತಿಯ ಒಯಾಸ್ಸಿಸ್ಸ್ ನೀನು ಎಂದಿದ್ದೆ
ಆದರೆ ಬಿರುಗಾಳಿಯಾಗಿ ನನ್ನ ಮನವೆಂಬಾ ಮರವನ್ನು ಕಿತ್ತು ಹಾಕಿದೆ ನೀನು
ಆಸೆಗೆ ತಣ್ಣೀರು ಎರಚು ಭಾವನೆಗಳಿಗೆ ಬೆಂಕಿ ಹಾಕಿ ಹೋದದ್ದಾದರೂ ಎಲ್ಲಿಗೆ
ನಿನ್ನ ಬರುವಿಗೆ ಕಾಲನ ಕಾಲಿಡಿದು ಕಾಯುತ್ತಿದ್ದರೆ ಕಿಂಚಿತ್ತಾದರೂ ಕರುಣೆ ಇಲ್ಲವೇ ನಿನಗೆ

ಹೇಳು ಹೇಗೆ ಹೇಳಲಿ ನಾನು ನೀನು ಒಳ್ಳೆಯವಳು ಎಂದು

Wednesday, 21 March 2012

ನನ್ನವಳು ಯಾರು ???


ನನ್ನವಳು ಯಾರೆಂದು ನಾನು ಯಾರನ್ನು ಕೇಳಲಿ?
ನ್ನನ್ನ ಮನದ ಮೂಲೆಯಲಿ ಕೊರೆಯುವ ಈ ಸುಪ್ತ ಪ್ರಶ್ನೆಗೆ ಉತ್ತರು ಕೊಡುವವರಾರು?
ನನ್ನ ಕಲ್ಪನೆಯ ನಾಗಾಲೋಟಕ್ಕೆ ಕೊನೆ ಎಂದು?
ನನ್ನ ಮನಸಿನ ಗುದ್ದಾಟಕ್ಕೆ ಮಿತಿಏ ಇಲ್ಲವೇ?
ಹೇಳು ಮನವೇ ನನ್ನವಳು ಯಾರೆಂದು ನಾನು ಯಾರನ್ನು ಕೇಳಲಿ?

ಆಗಸದಲ್ಲಿ ಮೂಡುವ ಮೋಡದ ಮರೆಯಲ್ಲಿ ಅವಳಿರುವಳೇ?
ಸಪ್ತ ಸಾಗರದಾಚೆ ಸುಪ್ತ ನದಿಗಳಲ್ಲಿ ಅವಳು ಸಿಗುವಳೇ?
ಕಾಣದ ಲೋಕದ ಕಂದಕದಲಿ ಅವುಳು ಮರೆಯಾಗಿರುವಳೇ?
ಹಸಿದ ನನ್ನ ಮನದ ಪ್ರಶ್ನೆಗೆ ಉತ್ತರ ಸಿಗುವುದೆಂದು?
ಹೇಳು ಮನವೇ ನನ್ನವಳು ಯಾರೆಂದು ನಾನು ಯಾರನ್ನು ಕೇಳಲಿ?

ಕೊರೆವ ಚಳಿಯಲಿ ಕನಲಿ ಬರುವ ಅವಳ ನೆನಪಿನಲ್ಲಿ
ನನ್ನ ನೆನಪುಗಳೆಲ್ಲ ನನ್ನ ಕಲ್ಪನೆಯಲಿ ಜಡವಾಗಿ ಹೋಗಿವಿ
ಕನಸುಗಳಲ್ಲೇ ಬಿಂಭವ  ಕಟ್ಟಿ ಕಲ್ಪನೆಯನ್ನ ಅದಕ್ಕೆ ಹೊದೆಸು ವಂತಾಗಿದೆ
ಕಾಣದ ಕಾಲನ ಕ್ರಮಕ್ಕೆ ಕಣ್ಣುಗಳು ಪರ ಪ್ರಪಂಚದ ಅರಿವು ಕಳೆದು ಕೊಂಡಿವೆ
ಹೇಳು ಮನವೇ ನನ್ನವಳು ಯಾರೆಂದು ನಾನು ಯಾರನ್ನು ಕೇಳಲಿ?

ನೀನು ಹೇಳುವ ಮುನ್ನ ನನ್ನ ಪ್ರಾಣದ ಗತಿ ಹೋದರೆ
ನನ್ನನ್ನು ಹೂಳವ ಗೋರಿಯಲ್ಲಿ ನನ್ನ ಕಲ್ಪನೆಗಳು ಪ್ರೆತವಾಗುವದು ಕಂಡಿತ
ನನ್ನ ಕಲ್ಪನೆಯೆಂಬ ಪ್ರೇತವು ಕನಸೆಂಬ ಪ್ರಪಂಚಕ್ಕೆ ಲಗ್ಗೆ ಹಾಕಿದರೆ
ಅದಕ್ಕೆ ನಾನಲ್ಲ ಹೊಣೆ ಕಾರಣ ಸತ್ತ ನರಗಳಲ್ಲಿ ಇರುವಿಕೆಯ ಜೀವ ಹುಡುಕಲಾದಿತೆ?
ಹೇಳು ಇಗಲಾದರು ಹೇಳು ಮನವೇ ನನ್ನವಳು ಯಾರೆಂದು ನಾನು ಯಾರನ್ನು ಕೇಳಲಿ?



Monday, 19 March 2012

ನನ್ನೆದೆ ಗೂಡಿಂದ ಹಾರಿ ಹೋದವು ನನ್ನ ಕಲ್ಪನೆ ಎಂಬ ಕನಸಿನ ಹಕ್ಕಿಗಳು


ನನ್ನೆದೆ ಗೂಡಿಂದ ಹಾರಿ ಹೋದವು ನನ್ನ ಕಲ್ಪನೆ ಎಂಬ ಕನಸಿನ ಹಕ್ಕಿಗಳು 

ಎದೆ ಗೂಡಿಂದ ಮರೆತು ಹೋದವು ನನ್ನ ಕನಸುಗಳೆಲ್ಲ ಅಂದು
ಗರಿ ಬಿಚ್ಚದೆ ಹಾರಿ ಹೋದವು ನನ್ನ ಕಲ್ಪನೆಗಳು ಇಂದು

ಭಾವನೆ ಎಂಬ ಕಾವಿನಲ್ಲಿ ಒಡೆದು ಹೊರಬಂದವು ಅಂದು
ಆದರು ಪಕ್ಕ ಚಿಗಿಯುವ ಮಿನ್ನ ಚಕ್ಕನೆ ಜಿಗಿದು ಹೋದವು

ಎಡ ಬಿಡದ ಬದುಕಿನ ಗುಟುಕಿಗಾಗಿ ದಿನವು ದುಡಿದೆ
ಆಕಾರವಿರದ ಹರಿವಾಣದಲಿ ತಂದು ಸುರಿದೆ

ನನ್ನ ಕಲ್ಪನೆಯ ಕೂಸಿನ ಗುಟಿಕಿಗಾಗಿ ದಿನ ದಿನವು ಹಾರಾಡಿದೆ
ಎದೆಯಂಬ ಆಕಾಶದಲಿ ದಿಕ್ಕಿನುದ್ದಕ್ಕು ಸೋರೆ ಹೊಡೆದೆ

ನಾ ಹೊಡೆದ ಸೋರೆ ಅವಕ್ಕೆ ಇಷ್ಟವಾಗದೆ ಹೋಯಿತೇ?
ಅದಕ್ಕೆ ಇಂದು ನನ್ನೆದೆಯ ಗೂಡಿಂದ ಗುರಿ ಇರದ ಜಾಗಕ್ಕೆ ಹಾರಿದವು

ನಿಮಗೆ ಸ್ವಾತಂತ್ರ್ಯದ ಸಂಬ್ರಮವಾದರೆ ನನಗೆ ನನ್ನ ಒಡಲುರಿಯ ಬೇಗುದಿ
ಹೇಗೆ ಹೇಳಲಿ ಕೈ ಜಾರಿ ಕಾಣದ ಲೋಕಕ್ಕೆ ಹೋದಿರಿ ನೀವು

ಹಾರಿದ ಸದ್ದಿಗೆ ನನ್ನ ಒಡಲಿನಲಿ ನಿರಾಶ ಭಾವದ ಕಿಚ್ಚು ಹೊತ್ತಿದೆ
ಎಲ್ಲಿ ಹೋದವು ಆ ನನ್ನ ಕನಸುಗಳು? ಕಲ್ಪನೆಗಳು? ಹಕ್ಕಿಗಳು


Wednesday, 7 March 2012

ಬಾಲ್ಯದ ನೆನಪು


                        ಬಾಲ್ಯದ ನೆನಪು 


ಎತ್ತ ಹೋದವು ನಮ್ಮ ಆ ಸುಂದರ ಕ್ಷಣವೆಂಬ ನೆನಪುಗಳು 
ಮನಸಿನಾಳದಿ ದಿನವು ಬಿಡದೆ ಕೊರೆಯುತ್ತಿರುವ  ಸಿಹಿ ಮುತ್ತುಗಳು
ಹಾಲ ಬೆಳದಿಂಗಳಿನ ತಿಂಗಳದ ಓಟದ ಮರು  ಹೊತ್ತಿಗೆಗಳು 
ಅಮ್ಮನು ತಿನುಸುತ್ತಿದ್ದ ಸಿಹಿ ತಿನಿಸಿನ ತುತ್ತುಗಳು 


ಕಣ್ಮರೆ ಆದವೇ ತುಂಟತನದ ತಂತಿಗಳೆಲ್ಲ 
ಮರೆತೇವೆ ಆ ನೆನಪುಗಳೆಂಬ ಬುತ್ತಿಗಳನ್ನೆಲ್ಲ
ಆಡಿದ ಆಟದ ಬುಟ್ಟಿಯಲ್ಲೇ ಕುತವೆ ನಮ್ಮ ಕನಸುಗಳೆಲ್ಲ
ಆದರು ನಮ್ಮ ಕನಸುಗಳಲ್ಲಿ  ಹಳೆಯ  ಕಲ್ಪನೆಯೂ ಇರಬಹುದಲ್ಲ 


ಈ ಕನಸೆಂಬ ಕುದುರಿಯನೇರಿ ಬಂದವೆ ಈ ಮಾಯಾ ಲೋಕಕ್ಕೆ
ಆಯಿತು ಇನ್ನುನಮ್ಮ ನೆನಪುಗಳೆಲ್ಲ ಸಿಕ್ಕಿ ಹಕಿಕೊಂಡವು ಕೊಕ್ಕೆಗೆ 
ಕರೆದರೂ ಬಾರದೆ ಕೂಗಿದರು ಕೇಳದೆ ಲೋಕದಲ್ಲಿ ಪಯಣ ನಮ್ಮದು 
ಇನ್ನೆಲ್ಲಿ ಆ ನಮ್ಮ ಬಾಲ್ಯದ ಸವಿ ನೆನಪು ನೆಪ ಮಾತ್ರಕಷ್ಟೇ!!!!!

Monday, 5 March 2012

ಮನಸ್ಸಿನ ಗಾಯ


                           ಮನಸ್ಸಿನ ಗಾಯ 



ಮನಸ್ಸು ಮೌನಿಯಾದಾಗ ಭಾವನೆ ಹರಿದಾಡುತ್ತದೆ 
ಭಾವನೆಯಲ್ಲಿ ನೀರವತೆ ಎದ್ದಾಗ ಕನಸು ಚಿಗುರೊಡೆಯುತ್ತದೆ !


ಭಾವನೆ ಲೋಕದಲಿ ಬಿಂಭದ ಭಿಭಿತ್ಸತೆ ಕಂಡಾಗ 
ಕನಸಿನ ಲೋಕದ ಹಂದರವು ತುಮುಲದಲ್ಲಿ ಒದ್ದಾಡುತ್ತದೆ !


ಕಲ್ಪನೆಯ ಕಂದಕದಲಿ ಕಡುಬಿಸಿಲಿನ ನೆರಳಿನ ನೆರಳಿನಲ್ಲಿದ್ದಾಗ 
ಮನಸ್ಸು ಪುಟಿಯುತ ಆಕಾಶದೆತ್ತರಕೆ ಹೋಗಿ ಚಿತ್ಕರಿಸುತ್ತದೆ !


ಕಾಳರಾತ್ರಿಯ ಮರಳಿನ ಮೇಲೆ ಚಿತ್ರ ಬಿಡಿಸಿದಾಗ 
ಸತ್ಯದ ಪ್ರೇತವು ಒಂದಾಗಿ ಚಿದ್ರಕಲ್ಪನೆಯಲಿ ಹೂಂಕರಿಸುತ್ತವೆ!


ಭಾವನೆ ಭಾವಲೋಕದಿಂದ ದೊಪ್ಪೆಂದು ಬಿದ್ದಾಗ 
ಆದ ಗಾಯದ ಗುರುತು ಮನಸ್ಸಿನಾಳದಿ ಎಂದೆಂದೂ ಹಚ್ಚಹಸಿರು !!

Friday, 2 March 2012

ನೆಮ್ಮದಿ

ನೆಮ್ಮೆದಿ ಎನ್ನುವದು ಆಗೊಮ್ಮೆ ಇಗೊಮ್ಮೆ ಸಿಗಬಹೂದಾದ ಸರಕು,
ಅದರದ್ದು ಚಕ್ರಗತಿ-ಒಮ್ಮೆ ನಿರವತೆ ಒಮ್ಮೆ ಚಿತ್ಕಾರ ,
ಮೊದಲು ನಿರಸತೆ ಅನಂತರ ರಸವತ್ತಾದ ಅನುಭವ,
ಅನಂತರ್ ಮನಸ್ಸು ಹಾಡಲೆದ್ದು ಊರಾಗಿಬಿಡುತ್ತದೆ


        

ನನ್ನ ಹಾಡು ಅಪೂರ್ಣ

ಹಾಡೋಂದು ಬರೆಯಲು ಕುಳಿತೆ
   ಬರಿದಾದ ಮನವ ತೆರೆದಿಟ್ಟು
ಮನದ ಮೂಲೆಯಲೆ ಕೊಳೆದು ಬಿದ್ದಿರುವ
    ಹಳೆಯ ಮುಸುಕಾದ ಕನಸಿನಲಿ

ಏನೆಂದು ಬರೆಯಲಿ ಹಾಡಿನಲಿ
   ಭಾವನೆಗಳೆ ಇಲ್ಲದ ಬರಡು ಹೃದಯದಲಿ
ಬರೆಯುತ್ತ ಕುಳಿತೆ ಕಡು ರಾತ್ರಿಯಲಿ
   ಅರ್ಥವಾಗದ ಚತುಷ್ಟಗಳು ನನ್ನ ಬಳಿಯಲಿ

ಆ ರಾತ್ರಿಯ ಕೊನೆಯ ಅಂಚಿನಲಿ
   ಮನದ ಮೂಲೆಯಲಿ ಆಸೆಯ ಮಿಂಚೊಂದು ಮೂಡಿ
ಮನದ ಮರಭೂಮಿಯಲಿ ಆಸೆಯ ಚಿಲುಮೆ ಚಿಮ್ಮಿ
   ಮತ್ತೆ ಮನಸಿನಾಳದಲಿ ಹೋಸ ಕನಸುಗಳು ಹೋಮ್ಮಿ

ಆದರೇನು ಅಸೆಯ ಕೂಪಕ್ಕೆ ಬಿದ್ದು
   ಹಳೆಯ ಹಾಡಿನಲಿ ಹೋಸ ಭಾವನೆಯನು ಎಕೆ ಬೆರಸಲಿ
ಅಂತು ರಾತ್ರಿವೋಂದು ಕಡಿದು ಹಗಲಾಯ್ತು
ಆದರು ನನ್ನ ಹಾಡು ಅಪೂರ್ಣ  



Shivanna Gundanavar

Wednesday, 29 February 2012

ಬದುಕು


ಬದುಕೆಂಬ ಬಯಲಲಿ ಕನಸು ಎಂಬ ಕುದುರಿಯನೇರಿ
ಕಲ್ಪನೆಯೆಂಬ ಲಗಾಮು ಹಿಡಿದು , ಓಡಿಸಿತ್ತಿರುವಾಗ ಆದರು ಬೆದರು ಬೇಡಾ ಏಕೆಂದರೆ ಕುದುರೆ  ಎಂಬುದು ಭಾವನೆ ತಕ್ಕಂತೆ ಕಾಲನ್ನು ಎತ್ತಿಡುತ್ತಿರುತ್ತದೆ, ನಿನ್ನ ಭಾವನೆಗಳು ಏರುಪೆರಾದಾಗ ನಿನ್ನ ಕನಸಿನ ಕುದುರೆ ನಿನ್ನ ಬದುಕಿನ ಬಯಲಲಿ ಸತ್ತುಹೊಗುತ್ತದೆ ಎಚ್ಚರ,

Tuesday, 28 February 2012

ನೆನಪುಗಳು

ನೆನಪುಗಳು ಅನ್ನುವದು ಜೀವನದ ಕೊಂಡಿ ಇದ್ದಂತೆ , ಬಾಲ್ಯ , ಯೌವ್ವನ , ಮುಪ್ಪು ಈ ಮೂರರ ನಡುವಿನ , ಆಗಿಹೋದ ಘಟನೆಗಳನ್ನ ಕಟ್ಟಿಕೊಡುವ ಮೂಲವೇ ನೆನಪು , ನೆನಪು ಅನ್ನುವದು ಕನಸಿಗಿಂತ ಹಿರಿದಾದ ಪದ, ಕನಸು ಮುಂದಿನ ಭವಿಷ್ಯದ ಹೆಬ್ಬಾಗಿಲು ಆದ್ರೆ ನೆನಪೆಂಬುದು ಆ ಹೆಬ್ಬಾಗಿಲಿಗೆ ತೋರಣ ಇದ್ದಂತೆ , ಆ ದಿನದ ಹಬ್ಬ ಮುಗಿದರು , ಒಣಗಿರುವ ತೋರಣದ ಮೇಲಿರುವ ಹಸಿರು ಛಾಯೆಯೇ!! ನೆನಪು. ನಾವಿರುವ ತನಕ ನಮ್ಮ ನೆನಪು ಅಜರಾಮರ , ನಾಳೆ ನಾವು ಸತ್ತಾಗ ನಮ್ಮ ಗೋರಿಯಲ್ಲಿ ಅವು ಸ್ವತಂತ್ರ , ಸತ್ತ ನೆನಪುಗಳಲ್ಲಿ ನಿಜವ ಹುಡುಕಬೇಡಾ ಗೆಳಯ, ನೆನಪುಗಳು ನಮ್ಮ ಜೀವನದ ಸುಪ್ತ ನದಿಗಳಿದ್ದಂತೆ, ಆ ನದಿಯನ್ನು ನೀನು ಬರಿದು ಮಾಡುವದಾದರೆ ಜೀವ ಜಲವೆಂಬ ನಿನ ಜೀವಕ್ಕೆ ಮರು ಹುಟ್ಟು ಎಂಬ ನೆನಪಿಗೆ ಹಾಹಾಕಾರ ಎದ್ದಿತು ಜೋಕೆ? @ Shivanand Gundanavar

Thursday, 23 February 2012

ನಲ್ಲೆಯ ನೆನೆಯುತ ..

ನಿನ್ನ ಸುಪ್ತ ಹೃದಯದ ಗೂಡಲಿ ಕುಳಿತಿರುವೆ ನಾ ಮರೆಯಾಗಿ...
 ನಿನ್ನ ಪ್ರೀತಿಯ ತಾಣದಲಿ ಕಾಯುತಿರುವೆ ನಿನ್ನ ಪ್ರೀತಿಗಾಗಿ. 
ನಿನ್ನ ಮೇಲಿನ ಪ್ರೇಮದ ದಾಹ ತಣಿಸಲು ಪದಪುಂಜಗಳೇ ಸಾಲದು ನಲ್e...
ಕವಿಗಳೆಷ್ಟೋ ಜನ ಸೋತಿರುವರು ನಮ್ಮಂತಹ ಪ್ರೇಮಿಗಳ ವರ್ಣನೆಗೆ ನಿಲುಕದೆ. 
ಇನಿಯನ ಸನಿಹದಿ ಹಕ್ಕಿಯಾಗಿ ಹಾರುವಾಸೆಯೆನಗೆ.
 ನಿನ್ನ ಮನದಲ್ಲಿ ಹುದುಗಿ ನಿನ್ನಲ್ಲೇ ನೆಲೆಯೂರುವಾಸೆ ನಿನ್ನಾಕೆಗೆ. 
ತೊರೆಯ ಕಂದಕದಿ ಮಂದಹಾಸದಿ ಸೆಳೆದೆ ಕಂಗಳಲಿ.
ನನ್ನನು ಮರೆತೆ ನಿನ್ನೊಂದಿಗೆ ನಾನು. @Shivanand Gundanavar 

ನಿನ್ನ ಕನಸು


ಏನೆಂದು ಬರೆಯಲಿ ಈ ಹರಿದ ಹಳೆಯ ಮನಸಿನಲಿ
ಭಾವನೆಗಳು ಬರಿದಾಗಿ ಭವ್ಯತೆ ಎಲ್ಲಾ ಸೊರಗಿ
ನನ್ನ ಕನಸುಗಳೆಲ್ಲ ಕಾಣದ ಕಂದಕದಲ್ಲಿ ಬಿದ್ದಿದೆ
ಕನಸೇ ಇಲ್ಲದೆ ಕಲ್ಪನೆ ನನ್ನದಾಗಿದೆ
 
ಹೇಳು ಏನೆಂದು ಬರೆಯಲಿ ಈ ಹರಿದ ಹಳೆಯ ಮನಸಿನಲಿ!!

ಕವಿಯಾಗಿ ಬರೆಯುವೆ ಎಂದು ಕುಳಿತರೆ ಕನಸುಗಳು ನನ್ನಲ್ಲಿಲ್ಲ
ಆದರು ನನ್ನ ಅಂತರಾಳದ ಕಲ್ಪನೆಗಳಿಗೆ ಮುಪ್ಪಿಲ್ಲಾ
ನೀ ಬಂದುರು ನೀ ಹೋದರು ನನ್ನ ಕಲ್ಪನೆಗಳಿಗೆ ನೀನು ಒಡತಿಯಲ್ಲ
ಇರಭಾಹುದು ನೀ ನನ್ನ ಕನಸಿನ ಸಾಮ್ರಜ್ಞೆ ಆದರೆ ನನ್ನಲ್ಲಿ ಈಗ ಕನಸುಗಳೇ ಇಲ್ಲಾ

ಹೇಳು ಏನೆಂದು ಬರೆಯಲಿ ಈ ಹರಿದ ಹಳೆಯ ಮನಸಿನಲಿ!!

ಹೇಳಿದೆನು ಅಂದು ನನ್ನ ಕನಸುಗಳೆಲ್ಲ ನಿನ್ನವೆಂದು
ಅದಕ್ಕೆ ನೀ ಹೋದ ದಾರಿಯಲ್ಲೇ ನಾ ಕಳೆದುಕೊಂಡೆ ನನ್ನ ಕನಸುಗಳೆಲ್ಲ
ಕಾಣುವೆನೆ  ನನ್ನ ಕಲ್ಪನೆಯಲ್ಲಿ ನಿನ್ನ ಕನಸುಗಳನ್ನು
ಸಾದ್ಯವಿಲ್ಲ ಎನ್ನದಿರು ಏಕೆಂದರೆ ನಿನ್ನ ಕನಸೇ ನನ್ನ ಜೀವೆನವೆಲ್ಲ (ಶಿವಾನಂದ್)