ನನ್ನವಳು ಯಾರೆಂದು ನಾನು ಯಾರನ್ನು ಕೇಳಲಿ?
ನ್ನನ್ನ ಮನದ ಮೂಲೆಯಲಿ ಕೊರೆಯುವ ಈ ಸುಪ್ತ ಪ್ರಶ್ನೆಗೆ ಉತ್ತರು ಕೊಡುವವರಾರು?
ನನ್ನ ಕಲ್ಪನೆಯ ನಾಗಾಲೋಟಕ್ಕೆ ಕೊನೆ ಎಂದು?
ನನ್ನ ಮನಸಿನ ಗುದ್ದಾಟಕ್ಕೆ ಮಿತಿಏ ಇಲ್ಲವೇ?
ಹೇಳು ಮನವೇ ನನ್ನವಳು ಯಾರೆಂದು ನಾನು ಯಾರನ್ನು ಕೇಳಲಿ?
ಆಗಸದಲ್ಲಿ ಮೂಡುವ ಮೋಡದ ಮರೆಯಲ್ಲಿ ಅವಳಿರುವಳೇ?
ಸಪ್ತ ಸಾಗರದಾಚೆ ಸುಪ್ತ ನದಿಗಳಲ್ಲಿ ಅವಳು ಸಿಗುವಳೇ?
ಕಾಣದ ಲೋಕದ ಕಂದಕದಲಿ ಅವುಳು ಮರೆಯಾಗಿರುವಳೇ?
ಹಸಿದ ನನ್ನ ಮನದ ಪ್ರಶ್ನೆಗೆ ಉತ್ತರ ಸಿಗುವುದೆಂದು?
ಹೇಳು ಮನವೇ ನನ್ನವಳು ಯಾರೆಂದು ನಾನು ಯಾರನ್ನು ಕೇಳಲಿ?
ಕೊರೆವ ಚಳಿಯಲಿ ಕನಲಿ ಬರುವ ಅವಳ ನೆನಪಿನಲ್ಲಿ
ನನ್ನ ನೆನಪುಗಳೆಲ್ಲ ನನ್ನ ಕಲ್ಪನೆಯಲಿ ಜಡವಾಗಿ ಹೋಗಿವಿ
ಕನಸುಗಳಲ್ಲೇ ಬಿಂಭವ ಕಟ್ಟಿ ಕಲ್ಪನೆಯನ್ನ ಅದಕ್ಕೆ ಹೊದೆಸು ವಂತಾಗಿದೆ
ಕಾಣದ ಕಾಲನ ಕ್ರಮಕ್ಕೆ ಕಣ್ಣುಗಳು ಪರ ಪ್ರಪಂಚದ ಅರಿವು ಕಳೆದು ಕೊಂಡಿವೆ
ಹೇಳು ಮನವೇ ನನ್ನವಳು ಯಾರೆಂದು ನಾನು ಯಾರನ್ನು ಕೇಳಲಿ?
ನೀನು ಹೇಳುವ ಮುನ್ನ ನನ್ನ ಪ್ರಾಣದ ಗತಿ ಹೋದರೆ
ನನ್ನನ್ನು ಹೂಳವ ಗೋರಿಯಲ್ಲಿ ನನ್ನ ಕಲ್ಪನೆಗಳು ಪ್ರೆತವಾಗುವದು ಕಂಡಿತ
ನನ್ನ ಕಲ್ಪನೆಯೆಂಬ ಪ್ರೇತವು ಕನಸೆಂಬ ಪ್ರಪಂಚಕ್ಕೆ ಲಗ್ಗೆ ಹಾಕಿದರೆ
ಅದಕ್ಕೆ ನಾನಲ್ಲ ಹೊಣೆ ಕಾರಣ ಸತ್ತ ನರಗಳಲ್ಲಿ ಇರುವಿಕೆಯ ಜೀವ ಹುಡುಕಲಾದಿತೆ?
ಹೇಳು ಇಗಲಾದರು ಹೇಳು ಮನವೇ ನನ್ನವಳು ಯಾರೆಂದು ನಾನು ಯಾರನ್ನು ಕೇಳಲಿ?

No comments:
Post a Comment