ಬಾಲ್ಯದ ನೆನಪು
ಎತ್ತ ಹೋದವು ನಮ್ಮ ಆ ಸುಂದರ ಕ್ಷಣವೆಂಬ ನೆನಪುಗಳು
ಮನಸಿನಾಳದಿ ದಿನವು ಬಿಡದೆ ಕೊರೆಯುತ್ತಿರುವ ಸಿಹಿ ಮುತ್ತುಗಳು
ಹಾಲ ಬೆಳದಿಂಗಳಿನ ತಿಂಗಳದ ಓಟದ ಮರು ಹೊತ್ತಿಗೆಗಳು
ಅಮ್ಮನು ತಿನುಸುತ್ತಿದ್ದ ಸಿಹಿ ತಿನಿಸಿನ ತುತ್ತುಗಳು
ಕಣ್ಮರೆ ಆದವೇ ತುಂಟತನದ ತಂತಿಗಳೆಲ್ಲ
ಮರೆತೇವೆ ಆ ನೆನಪುಗಳೆಂಬ ಬುತ್ತಿಗಳನ್ನೆಲ್ಲ
ಆಡಿದ ಆಟದ ಬುಟ್ಟಿಯಲ್ಲೇ ಕುತವೆ ನಮ್ಮ ಕನಸುಗಳೆಲ್ಲ
ಆದರು ನಮ್ಮ ಕನಸುಗಳಲ್ಲಿ ಹಳೆಯ ಕಲ್ಪನೆಯೂ ಇರಬಹುದಲ್ಲ
ಈ ಕನಸೆಂಬ ಕುದುರಿಯನೇರಿ ಬಂದವೆ ಈ ಮಾಯಾ ಲೋಕಕ್ಕೆ
ಆಯಿತು ಇನ್ನುನಮ್ಮ ನೆನಪುಗಳೆಲ್ಲ ಸಿಕ್ಕಿ ಹಕಿಕೊಂಡವು ಕೊಕ್ಕೆಗೆ
ಕರೆದರೂ ಬಾರದೆ ಕೂಗಿದರು ಕೇಳದೆ ಲೋಕದಲ್ಲಿ ಪಯಣ ನಮ್ಮದು
ಇನ್ನೆಲ್ಲಿ ಆ ನಮ್ಮ ಬಾಲ್ಯದ ಸವಿ ನೆನಪು ನೆಪ ಮಾತ್ರಕಷ್ಟೇ!!!!!

No comments:
Post a Comment