ನೀ ನಾ ಒಳ್ಳೆಯವಳು
ಹೇಳು ನೀನು ಒಳ್ಳೆಯವಳು ಎಂದು ನಾನೇಕೆ ಹೇಳಲಿನಿಷ್ಕಲ್ಮಶ ಮನಸಲ್ಲಿ ಹಾಲಾಹಲದ ವಿಷವನಿತ್ತವಳು ನೀನು
ನನ್ನ ಕನಸಿಗೆ ಕಾಣದ ದಾರಿಯಲಿ ಗೋರಿ ಕಟ್ಟಿದವಳು ನೀನು
ನನ್ನ ಕಲ್ಪನೆಯನ್ನೇ ಚಿದ್ರ ವಿಚಿದ್ರವಾಗಿ ಹೊಸೆದು ಹಾಕಿದವಳು ನೀನು
ಹೇಳು ಹೇಗೆ ಹೇಳಲಿ ನಾನು ನೀನು ಒಳ್ಳೆಯವಳು ಎಂದು
ನನ್ನ ಭಾವನೆಗಳಿಗೆ ಜೀವವಾಗಿ ನೀನು ಬಂದೆ
ಕಲ್ಪನೆ ಇಲ್ಲದ ಬರಡಾಗಿದ್ದ ಈ ಮನಕೆ ಜೀವ ಜಲವಾಗಿ ಬಂದೆ
ಅಸೆಗಳ ಅರಿವಿಲ್ಲದಿದ್ದ ನನಗೆ ಬೊಗಸೆ ತುಂಬಾ ಆಸೆಗಳ ತಂದವಳು ನೀನು
ಕನಲಿ ಹೋದ ಮನಕೆ ಜೇನಿನ ಹನಿಯಾಗಿ ಬಂದೆ
ಆದರೆ ಇನ್ನೇನು ನಾನು ನಿನ್ನವನಾಗ ಬೇಕೆನ್ನು ಅಷ್ಟರಲ್ಲಿ ಎಲ್ಲಿ ಹೋದೆ ನೀನು?
ಹೇಳು ಹೇಗೆ ಹೇಳಲಿ ನಾನು ನೀನು ಒಳ್ಳೆಯವಳು ಎಂದು
ಮನದ ಮರುಭೂಮಿಯಲ್ಲಿ ಪ್ರೀತಿಯ ಒಯಾಸ್ಸಿಸ್ಸ್ ನೀನು ಎಂದಿದ್ದೆ
ಆದರೆ ಬಿರುಗಾಳಿಯಾಗಿ ನನ್ನ ಮನವೆಂಬಾ ಮರವನ್ನು ಕಿತ್ತು ಹಾಕಿದೆ ನೀನು
ಆಸೆಗೆ ತಣ್ಣೀರು ಎರಚು ಭಾವನೆಗಳಿಗೆ ಬೆಂಕಿ ಹಾಕಿ ಹೋದದ್ದಾದರೂ ಎಲ್ಲಿಗೆ
ನಿನ್ನ ಬರುವಿಗೆ ಕಾಲನ ಕಾಲಿಡಿದು ಕಾಯುತ್ತಿದ್ದರೆ ಕಿಂಚಿತ್ತಾದರೂ ಕರುಣೆ ಇಲ್ಲವೇ ನಿನಗೆ
ಹೇಳು ಹೇಗೆ ಹೇಳಲಿ ನಾನು ನೀನು ಒಳ್ಳೆಯವಳು ಎಂದು

No comments:
Post a Comment