ನನಗೊಂದು ಹೃದಯಬೇಕು
ಮಧುರವಾದ ಪ್ರೀತಿಗೆ ನವಿರಾದ ಮನಸ್ಸಿನ ಮುಗ್ದವಾದ ಭಾವನೆಗಳ ಹೃದಯಬೇಕು ಗೆಳತಿ!
ಕಾರಿರುಳ ರಾತ್ರಿಯಲು, ಕಡುಬೆಂಕಿಯ ನೆರಳಿನಲು ಪ್ರೀತಿಗಾಗಿ ಜೀವ ಕಾಯಬೇಕು
ನನಗೊಂದು ಹೃದಯಬೇಕು ಗೆಳೆತಿ!
ಸಾವಿರ ಸಾಗರಗಳಾಚೆ, ನೂರು ಗಿರಿಗಳ ಮೇಲೆ
ನಮ್ಮ ಒಲುಮೆಯ ಮಂಟಪ ಕಟ್ಟಬೇಕು
ಅದರಲಿ ನನ್ನ ಕಲ್ಪನೆಯ ಕನಸುಗಳನ್ನಿಟ್ಟು ಪೂಜಿಸಬೇಕು
ಕೊನೆಗೆ ಒಂದು ದಿನ!!!
ನಿನ್ನ ಪ್ರೀತಿ ಸಿಕ್ಕ ಮೇಲೆ ನಾ ಸಾಯಬೇಕು!!
ನನ್ನ ನೆನಪುಗಳ ಜೊತೆ ಕನಸುಗಳು ನಿನ್ನ ಸೇರಬೇಕು!!!
No comments:
Post a Comment