Mundaragi Bheemaraya.
ಭಾರತದ ಮೊದಲ ಸ್ವಾತಂತ್ರ್ಯ ದಂಗೆಯಲಿ ಉತ್ತರದವರಷ್ಟೇ ಅಲ್ಲ ದಕ್ಷಿಣದವರು ಕೂಡ ಸಾಕಷ್ಟಿದ್ದಾರೆ ಅದರಲ್ಲಿ ಕರುನಾಡಿನ ಕಿಡಿಗಳು ಪ್ರಜ್ವಲಿಸಿದ್ದು ಹಲವಾರು ಅಂತಹ ಕಿಡಿಗಳಲ್ಲಿ ಮೊದಲು ಜಗಮಗಿಸಿದ್ದು ಮುಂಡರಗಿಯಲ್ಲಿ, ಆ ಮುಂದರಿಗಿಯ ಸಿಂಹದ ಹೆಸರೇ ಭೀಮರಾಯ - ಮುಂಡರಗಿ ಭೀಮರಾಯ , ಭೀಮರಾಯನು ರಾಜನಲ್ಲ, ರಾಜವಂಶಸ್ಥನೂ ಅಲ್ಲ, ದೇಸಾಯಿಯೂ ಅಲ್ಲ. ಮಾತೃಭೂಮಿಯ ಸರ್ವಸಂಪತ್ತೂ ಅನ್ಯರ ಪಾಲಾಗಿ, ಧರ್ಮ, ಸಂಸ್ಕೃತಿಗಳ ನಾಶವಾಗಿ ದೇಶ ಬಾಂಧವರು ಪರರ ಆಳಾಗುವರಲ್ಲ ಎಂಬ ದೇಶಪ್ರೇಮದಿಂದ ಇಂಗ್ಲಿಷರ ವಿರುದ್ಧ ಬಂಡೆದ್ದ ವೀರ. ಅವನು ಒಬ್ಬ ಸಾಮಾನ್ಯ ಪ್ರಜೆ. ಸಹಸ್ರಾರು ದೇಶಭಕ್ತರನ್ನು ಸಂಘಟಿಸಿದ ಪುರುಷಸಿಂಹ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭಗೊಂಡಾಗ ಕರ್ನಾಟಕದ ಅನೇಕ ಮಹಾರಾಜರುಗಳು ಕೈಕಟ್ಟಿ ಕುಳಿತಿದ್ದಾಗ ಜನತೆಯ ಪ್ರತಿನಿಧಿಯಾಗಿ ಕೈಯಲ್ಲಿ ಶಸ್ತ್ರ ಹಿಡಿದುನಿಂತು ಹೋರಾಡಿ ಮಡಿದ ಧೀರಪುರುಷ ಮುಂಡರಗಿ ಭೀಮರಾಯ ! ಇವನ ಧೀರೋದಾತ್ತ ಜೀವನ ಹೋರಾಟ, ಸಮಯ ಸ್ಫೂರ್ತಿಗಳು ಎಲ್ಲ ಕಾಲಕ್ಕೂ ನವಚೇತನವನ್ನು ಹೊಮ್ಮಿಸುವುದರಲ್ಲಿ ಸಂದೇಹವಿಲ್ಲ !
https://youtu.be/picaNUM-8wc
