ಬರಗಾಲದ ಪ್ರೀತಿ
ಬರಗಾಲದ ಬಿರುಬಿಸಿಲಲಿ ನಿಂತು
ನಾ ಪರಿತಪಿಸುತ್ತಿದ್ದೆ...
ಎಲ್ಲಿಂದಲೋ ನೀನು ನನಗಾಗಿಯೇ ಎಂಬಂತೆ..
ತೇಲಿ ಬಂದೆ..
ಮಾತಿಲ್ಲದೆ ಮಳೆಯಾಗಿ ಹನಿದೆ!!
ನಿನ್ನೊಲವಿನಲಿ ನಾನು ನೆನೆದು
ಮಣಿದದ್ದು ಹೌದಾದರೂ..
ಮತ್ತೆಲ್ಲಿ ನೀ ಮರೆಯಾಗುವೆಯೋ ಎಂದು
ಕಂಗಾಲಾಗಿರುವೆ.
ನಿರಾಸೆಗಳೇ ತುಂಬಿದ್ದ ದಾರಿಯಲ್ಲಿ
ಅಯಾಚಿತವಾಗಿ ಎದುರಾದ ಆಸೆ ದೀಪ ನೀನು
ಮಾಯದ ಗಾಳಿಗೆ ಆರಿಹೋಗುವೆಯೇನೋ
ಎಂಬುವುದೇ ನನ್ನ ದಿಗಿಲು...
ದಾರಿ ನಿಚ್ಚಳವಿಲ್ಲ.. ಗುರಿಯಂತು
ಮೊದಲೇ ಇಲ್ಲ..
ಏಕಾಂಗಿ ಪಯಣಿಗಳು ನಾ
ಬೆರಳು ಬೆಸೆಯಲು ಕೂಡ ಜತೆಗೊಬ್ಬರಿಲ್ಲ..
ಹಾಗಿರಲು
ನೀ ಬಂದೆ ಸಹಚಾರಿಯಾಗಿ
ಸೋತ ಒಡಲಿಗೆ ತೋಳಿನಾಸರೆಯಾಗಿ..
ಬಳ್ಳಿಯಂತೆ ನಿನ್ನನ್ನೇ ನಾ ಬಳಸಿ ಹಿಡಿದಿರುವೆ....
ಆದರೂ ಎದೆಯೊಳಗೆ
ಎಲ್ಲಿ ನೀ ನನ್ನ
ಕೊಡವಿಬಿಡುವೆಯೋ ಎಂಬ ತಲ್ಲಣವೇ ಇದೆ.
Shivanna Gundanavar
ನಾ ಪರಿತಪಿಸುತ್ತಿದ್ದೆ...
ಎಲ್ಲಿಂದಲೋ ನೀನು ನನಗಾಗಿಯೇ ಎಂಬಂತೆ..
ತೇಲಿ ಬಂದೆ..
ಮಾತಿಲ್ಲದೆ ಮಳೆಯಾಗಿ ಹನಿದೆ!!
ನಿನ್ನೊಲವಿನಲಿ ನಾನು ನೆನೆದು
ಮಣಿದದ್ದು ಹೌದಾದರೂ..
ಮತ್ತೆಲ್ಲಿ ನೀ ಮರೆಯಾಗುವೆಯೋ ಎಂದು
ಕಂಗಾಲಾಗಿರುವೆ.
ನಿರಾಸೆಗಳೇ ತುಂಬಿದ್ದ ದಾರಿಯಲ್ಲಿ
ಅಯಾಚಿತವಾಗಿ ಎದುರಾದ ಆಸೆ ದೀಪ ನೀನು
ಮಾಯದ ಗಾಳಿಗೆ ಆರಿಹೋಗುವೆಯೇನೋ
ಎಂಬುವುದೇ ನನ್ನ ದಿಗಿಲು...
ದಾರಿ ನಿಚ್ಚಳವಿಲ್ಲ.. ಗುರಿಯಂತು
ಮೊದಲೇ ಇಲ್ಲ..
ಏಕಾಂಗಿ ಪಯಣಿಗಳು ನಾ
ಬೆರಳು ಬೆಸೆಯಲು ಕೂಡ ಜತೆಗೊಬ್ಬರಿಲ್ಲ..
ಹಾಗಿರಲು
ನೀ ಬಂದೆ ಸಹಚಾರಿಯಾಗಿ
ಸೋತ ಒಡಲಿಗೆ ತೋಳಿನಾಸರೆಯಾಗಿ..
ಬಳ್ಳಿಯಂತೆ ನಿನ್ನನ್ನೇ ನಾ ಬಳಸಿ ಹಿಡಿದಿರುವೆ....
ಆದರೂ ಎದೆಯೊಳಗೆ
ಎಲ್ಲಿ ನೀ ನನ್ನ
ಕೊಡವಿಬಿಡುವೆಯೋ ಎಂಬ ತಲ್ಲಣವೇ ಇದೆ.
Shivanna Gundanavar