Monday, 16 December 2013

ನಿನ್ನ ಪ್ರೇಮ



ಮಾಗಿಯ ಚಳಿಯ ಇಬ್ಬನಿಯಂತೆ ನಿನ್ನ ಪ್ರೇಮ

ಪ್ರೀತಿಯಿಂದ ತಬ್ಬಿದಾಗ ಆಗುವ ಪುಳಕದ ಜಳಕ ಅದೆಂತು ವರ್ಣಿಸಲಿ

ಋತುಗಳು ಉರುಳಿದಂತೆ ಚಳಿ ಮಾಸಿ ಬೇಸಿಗೆಯ ಬಿಸಿಲಲಿ ಬಾಯಾರಿ ಕಾದುರುವೆ

ಮತ್ತೆ ಬರುವ ಆ ಋತುಗಳ ಒಳಗೆ ನಿನ್ನ ಮಂಜಿನ ಹನಿಯ ಕಾತುರದಲಿ

ಭಾವನೆಗಳ ಮೇಲೆ


Monday, 25 February 2013

ಪ್ರೀತಿಯ ನೋವು


ಪ್ರೀತಿಯ ನೋವು 

ಭಾನಿನ ಅಂಚಿನಲ್ಲಿ ಕೆಳುತ್ತಿದೆಯೇ ನನ್ನ ಚಿತ್ಕಾರ 
ಇದೆ ಏನು ನೀನು ನನಗೆ ಮಾಡಿದ ನೋವಿನ ಸತ್ಕಾರ 

ಆಸೆಯ ವಾಂಚೆಯಲ್ಲಿ ಬಿಗುತಿದ್ದೆ ಅಂದಿನ ಸವಿಕ್ಷಣಗಳಲ್ಲಿ 
ಇಂದು ಅರ್ಥವಾಗುತ್ತಿದೆ ಅಂದಿನ ಕ್ಷಣಿಕ ಸುಖದ ಇಂದಿನ ನೋವಿನಲ್ಲಿ 

ಅಂದು ನೀನು ಅಂದೇ ನೀನೆ ನನ್ನ ಹೃದಯದ ಮಾಲೀಕ
ಪೆದ್ದ ಗೊತ್ತಾಗಲಿಲ್ಲ ಅದುವೇ ನನ್ನ ನೋವಿನ ಚಿಲಕ 

ಎದೆ ಸ್ಥಾಯಿಯ ಒಳಗೆ ನಿಂತು ನೀ ಮಾಡಿದೆ ಸದ್ದು
ಇಣುಕುತಿತ್ತು ನಿನ್ನ ಮನದೊಳಗೆ ನನ್ನ ಕಣ್ಣು ಕದ್ದು

ಪುಟಿಯುವದೆ ನನ್ನ ಮನದ ಮರಭೂಮಿಯಲ್ಲಿ ನಿನ್ನ ಪ್ರೀತಿಯ ಒಯಾಸಿಸ್ಸ್ 
ಪುಟಿಯದಿದ್ದರೆ ಅಂದೇ ನನ್ನ ಸಾವಿನ ಕೊನೆಯ ಕ್ಲಿಪ್ಸ್ 

ನನ್ನ ಹಕ್ಕಿ


    ನನ್ನ ಹಕ್ಕಿ 

ಹೇ ನನ್ನ ಪುಟ್ಟ ಹಕ್ಕಿ ಎನಿತು ಬಣ್ಣಿಸಲಿ ನಿನ್ನ ಅಂದ
ಏಕೆಂದರೆ ಇಂದು ನನ್ನ ಹ್ರುನ್ಮನಗಳ ಗೆದ್ದತು ನಿನ್ನ ಚೆಂದ

ನನ್ನಿಂದ ನೀ ದೂರ ಹೋಗಲಾರೆ ಎಂದೆಂದೂ
ಕಾರಣ ಬೇಕಿಲ್ಲ ನೀನು ನನ್ನವಳೇ ಆಗುವೆ ಇಂದು

ನನ್ನವಳು ನೀ ಅದಾಗ ನನ್ನಲ್ಲೆಕಿಲ್ಲ ಮೊದಲಿನ ಕಾತುರ
ಓಹ್ ಇರಬೇಕು ನನ್ನ ಮನಸ್ಸಿನೊಳಗೆ ನಿನ್ನ ಬೆಚ್ಚನೆಯ ಪ್ರೇಮಾಂಕುರ

ಯಾಕೋ ಏನೋ ಪ್ರತಿ ದಿನವು ನನ್ನ ಮನ ತುಮುಲದ ತಟ್ಟೆ
ಏಕೋ ನೀ ಕೊಟ್ಟ ಪ್ರೀತಿ ಹಿಡಸಿಲ್ಲ ನನ್ನ ಮನಸ್ಸಿನ ಹೊಟ್ಟೆಗೆ

ಅಯ್ಯೋ ಹುಚ್ಚಿ ನಿನಗೆ ಅರ್ಥವಾಗಲಿಲ್ಲವೇ ನನ್ನ ನೋವಿನ ಹರಿವಾಣ
ನೀನು ನನ್ನನ್ನು ಬಿಟ್ಟು ಹೋದರೆ ಅಂದೇ ನಾನಗುವೇ ಜೀವವಿದ್ದರು ನಿರ್ವಾಣ

ನಿನಗೆ ಹಾರುವ ರೆಕ್ಕೆಗಳಿದ್ದರು ನೋಡದ ಕಣ್ಣುಗಳು ನನ್ನವು ಅಂದು
ಆದರೆ ಇಂದು ನಿನ್ನ ರೆಕ್ಕೆಗಳು ಈಗ ಸ್ವತಂತ್ರ ನನ್ನ ಕಣ್ಣಿಂದ ಬಹು ದೂರ


ನೀ ಹೋದ ದಿನದಿಂದ ಎನಿತು ವರ್ಣಿಸಲಿ ನನ್ನ ವ್ಯಥೆಯ
ಅರ್ಥವಾಗದೆ ಮುಗಿದು ಹೋಯಿತು ನನ್ನ ಬದುಕಿನ ಸಮಯ


                                   ಶಿವಾನಂದ್ ಜಿ



Saturday, 26 January 2013

ನನ್ನ ಪರಿಚಯ

ನನ್ನ ಹೆಸರು ಶಿವಾನಂದ್ ಗುಂಡನವರ, ಮೂಲತಃ ನಾನು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದವನು. ನಾನು ನನ್ನ ಪ್ರೌಡ ಮತ್ತು ನನ್ನ ಪ್ರಾಥಮಿಕ ಶಿಕ್ಷಣವನ್ನ ನಮ್ಮೂರ ಸರ್ಕಾರೀ ಶಾಲೆಗಳಲ್ಲೇ ಮುಗಿಸಿದ್ದು ತದನಂತರ ಪದವಿಪೂರ್ವ ಶಿಕ್ಷಣವನ್ನ ಬಾಗಲಕೋಟೆಯಲ್ಲಿ ಮುಗಿಸಿದ್ದೇನೆ. ತದ ನಂತರ ನನ್ನ ಬದುಕು ಮಾಯಾ ನಗರಿಯಲ್ಲಿ, ಇಲ್ಲಿಯೇ ನನ್ನ ಪದವಿ ಶಿಕ್ಷಣ ಮುಗಿಸಿದ್ದು, ಕನ್ನಡ ಅಂದ್ರೆ ನನ್ನುಸಿರು, ಆಗಾಗ ಔಟಿಂಗ ಎಂಬ ಪದವನ್ನ ನಾನು ನನ್ನದೆಯಾದ ರೀತಿಯಲ್ಲಿ ಬಳಸಿ  ಆ ವೇಳೆಯಲ್ಲಿ ಕೆಲವೊಂದು ಸಣ್ಣ ಕನ್ನಡ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದೇನೆ ಮತ್ತು ಭಾಗಿಯಾಗಿದ್ದೇನೆ. ಹಾಗೆಯೇ ಸಣ್ಣ ಪುಟ್ಟ ಸಾಮಾಜಿಕ ಕಳಕಳಿ ಇರುವ  ಕಾರ್ಯಕ್ರಮಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದೇನೆ. ಆಗಾಗ ಬಿಡುವು ಸಿಕ್ಕಾಗ ಮನದ ಭಾವನೆಗಳನ್ನ ಬರಹ ರೂಪಕ್ಕೆ ತರ್ತಾ ಇರತೇನೆ, ಹಾಗೆ ತಂದ ಬರಹಗಳನ್ನ ಕೆಲವೊಂದು ಈ ಬ್ಲಾಗಿನ ಮೂಲಕ ನಿಮ್ಮ ಮುಂದೆ ಇಟ್ಟಿದ್ದೇನೆ. ತಪ್ಪಿದ್ದರೆ ತಿದ್ದಿ ಹೇಳಿ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.